ನೊಂದು ಬಂದೆನೊ ಕಾಂತೇಶ ಕೈಯನೆ ಪಿಡಿಯೊ
ಮಂದಭಾಗ್ಯಳ ಜೀವೇಶ ಪ.
ಅಂದು ಶ್ರೀ ರಾಮರ ಸಂದೇಶವನ್ನೆ ಭೂ-
ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ.
ಪರಮ ಕರುಣಾಳು ಶೌರಿ | ಭಕ್ತರ ಕಾಯ್ವ
ದುರಿತದೂರನೆ ಉದಾರಿ
ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ
ಎರವು ಮಾಡದೆ ದುರಿತ ತರಿಯುತ
ಪೊರೆಯೊ ಗುರುವರ ರಾಮಕಿಂಕರ 1
ಗುರುಕರುಣದ ಬಲದಿ | ಅರಿತೆನೊ ನಿನ್ನ
ಚರಣ ನಂಬಿದೆ ಮನದಿ
ಪರಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ
ಹರಿವರನೆ ದಯಮಾಡು ಶ್ರೀ ಹರಿ
ದರುಶನವನನವರವಿತ್ತು 2
ಕಾಂತನ ಅಗಲಿರಲು | ಚಿಂತೆಯಲಿ ಭೂ
ಕಾಂತೆ ವನದೊಳಗಿರಲು
ಸಂತೋಷದಿಂ ರಾಮನಂತರಂಗವನರುಹಿ
ಸಂತಸವಪಡಿಸುತಲವನಿಸುತೆಯ
ನಿಂತೆ ರಾಮರಿಗ್ಹರುಷ ತೋರಿ 3
ದ್ರುಪದ ಸುತೆಯಳ ಕೀಚಕ | ದುರ್ಮನದಲಿ
ಅಪಮಾನಪಡಿಸೆ ದುಃಖ
ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ
ಕುಪಿತದಿಂದಲಿ ಖಳನ ಕೊಂದೆ
ಅಪರಿಮಿತ ಬಲಭೀಮ ಪ್ರೇಮ 4
ಮಿಥ್ಯಾವಾದದ ಭಾಷ್ಯಕೆ | ಸುe್ಞÁನಿಗಳ್
ಅತ್ಯಂತ ತಪಿಸುತಿರೆ
ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ
ಘಾತುಕರ ಮತ ಮುರಿದ ಮಧ್ವನೆ
ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5
ಪ್ರಾಣಪಾನವ್ಯಾನ | ಉದಾನ ಸ
ಮಾನ ಭಾರತಿ ಕಾಂತನೆ
e್ಞÁನಿಗಳಿಗೆ ಪ್ರೀತ e್ಞÁನ ಭಕ್ತಿಪ್ರದಾತ
ದೀನಜನ ಮಂದಾರ ಕಾಯೊ
ದೀನಳಾಗಿಹೆ ಕೈಯ ಮುಗಿವೆ 6
ನೋಯಲಾರೆನೊ ಭವದಿ | ಬೇಗನೆ ತೋರೊ
ಧ್ಯೇಯ ವಸ್ತುವ ದಯದಿ
ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ
ಜೀಯನೆ ಕೈ ಪಿಡಿಯೊ ಕಮಲ ದ-
ಳಾಯತಾಕ್ಷನ ಮನದಿ ತೋರಿ7
ಹರಣ ನಿನಗೊಪ್ಪಿಸಿದೆ | ಸುರವಂದಿತ
ಕರೆದು ಮನ್ನಿಸಿ ಕಾಪಾಡೊ
ಸಿರಿವರನನು ಹೃತ್ಸರಸಿಜದಲಿ ತೋರೊ
ಧರೆಯ ವಸ್ತುಗಳ್ ಮಮತೆ ತೊರೆಸು
ಹರಿಯ ನಾಮಾಮೃತವನುಣಿಸು 8
ಈ ಪರಿಬಂದೆ ಅನಿಲ | ನಿನ್ನೊಳು ವಾಸ
ಗೋಪಾಲಕೃಷ್ಣವಿಠ್ಠಲ
ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ
ಕೈಪಿಡಿದು ಸಂತೈಸು ಕರುಣದಿ
ಭಾಪುರೇ ಕದರುಂಡಲೀಶ 9
****