Showing posts with label ಕೇಶವ ಬಾ ನಾರಾಯಣ ಬಾ ಮಾಧವ ಬಾ kamalanabha vittala KESHAVA BAA NARAYANA BAA MAADHAVA BAA. Show all posts
Showing posts with label ಕೇಶವ ಬಾ ನಾರಾಯಣ ಬಾ ಮಾಧವ ಬಾ kamalanabha vittala KESHAVA BAA NARAYANA BAA MAADHAVA BAA. Show all posts

Tuesday, 7 December 2021

ಕೇಶವ ಬಾ ನಾರಾಯಣ ಬಾ ಮಾಧವ ಬಾ ankita kamalanabha vittala KESHAVA BAA NARAYANA BAA MAADHAVA BAA



by ನಿಡಗುರುಕಿ ಜೀವೂಬಾಯಿ
ಕೇಶವ ಬಾ ನಾರಾಯಣ ಬಾ ಬಾ ಮಾಧವ ಬಾ ಮಧುಸೂದನ ಬಾ ಪ

ಗೋವಿಂದ ಬಾ ಬಾ ಗೋಪಾಲ ಬಾ ಬಾಗೋವರ್ಧನ ಗಿರಿಧಾರಿಯೆ ಬಾ ಅ.ಪ

ರಂಗನೆ ಅಂದಿಗೆ ಗೆಜ್ಜೆಯಕಟ್ಟಿಚುಂಗುಬಿಟ್ಟು ರುಮಾಲನೆ ಸುತ್ತಿಶೃಂಗಾರದ ಹಾರ ಪದಕಗಳ್ಹಾಕಿಅಂಗಳದೊಳಗಾಡಲು ಕಳುಹುವೆನು 1

ಚಂಡು ಬುಗುರಿ ಗೋಲಿ ಗಜ್ಜುಗ ಹರಿಯೆಗುಂಡು ಬಿಂದಲಿನಿಟ್ಟಿ ಕರದಲಿ ಕೊಡುವೆಹಿಂಡುಗೋಪಾಲರ ಕೂಡಿಸುವೆಪುಂಡರಿಕಾಕ್ಷನೆ ಪಾಲಿಸು ದೊರೆಯೆ 2

ಹಸುಳೆ ನಿನಗೆ ಹೊಸ ಬೆಣ್ಣೆಯ ನೀವೆಬಿಸಿ ಬಿಸಿ ಕಡುಬು ಕಜ್ಜಾಯವ ಕೊಡುವೆಶಶಿಮುಖಿಯರ ಕೂಡಾಡದಿರೆನುವೆಮೊಸರು ಬೆಣ್ಣೆ ಪಾಲ್ಸಕ್ಕರೆ ಕೊಡುವೆ 3

ಜರದವಲ್ಲಿ ಅಲಂಕರಿಸುತ ನಲಿವೆಪರಿಪರಿ ಗೆಳೆಯರ ಕೂಡಿಸಿ ಕೊಡುವೆಮುರಳಿ ನುಡಿಸೆನ್ನುತಕರಮುಗಿವೆಪರಮಾತ್ಮನೆ ಜಗನ್ಮೋಹನ ಹರಿಯೆ 4

ಕಮಲಭವೇಂದ್ರಾದ್ಯಮರರು ಪೊಗಳೆಕಮಲಪುಷ್ಪ ಮಲ್ಲಿಗೆ ಮಳೆ ಕರೆಯೆಕಮಲನಾಭ ವಿಠ್ಠಲ ಶ್ರೀಹರಿಯೆಶ್ರಮ ಪರಿಹರಿಸೆನ್ನುತ ಪ್ರಾರ್ಥಿಸುವೆ 5
***