Showing posts with label ಬಾರದೇತಕೋ ತವದಯ tulasi. Show all posts
Showing posts with label ಬಾರದೇತಕೋ ತವದಯ tulasi. Show all posts

Friday, 27 December 2019

ಬಾರದೇತಕೋ ತವದಯ ankita tulasi

by ತುಳಸೀರಾಮದಾಸರು
ಬಾರದೇತಕೋ ತವದಯ ಭಗವತಿಭಾರ್ಗವಿದೇವೀ 

ಘೋರದುರಿತಪರಿಹಾರಿಣಿ ಭಕ್ತೋದ್ಧಾರಿಣಿ ಭಾಗ್ಯ ವಿಹಾರಿಣಿ ಜನನೀ 1

ವಂದಿಪೆ ಪಾದದ್ವಂಧ್ವ ಸರೋಜವಇಂದಿರೆಹರಿಯುರಮಂದಿರ ವಾಸಿನಿ2

ನಾರಿಶಿರೋಮಣಿ ನಂಬಿದೆ ನಿನ್ನನುನಾರಾಯಣೀ ಭವನಾಶಿನಿ ಶಾರ್ಙಣಿ 3

ದಾರಿದ್ರ್ಯಾಪಹ ಧನಧಾನ್ಯಪ್ರದಕ್ಷೀರಾರ್ಣವ ಸುತೇ ಶ್ರೀಮಹಾಲಕ್ಷ್ಮೀ 4

ಹೇಮಗಿರೀಶ್ವರಿ ಭಾಮಾ | ತುಲಸೀರಾಮದಾಸನುತ ಸುಕ್ಷೇಮವು ನಿನ್ನದು 5
********