ankita ಶ್ರೀಕರವಿಠಲ
ರಾಗ: ಭೀಮ್‍ಪಲಸ್ ತಾಳ: ಆದಿ
ಸೇವಿಸು ನೀ ಮಂತ್ರಸದನಾದಿರುತಿಹನ ಯ-
ತಿವರನ ಯತಿವರನ ಪ್ರತಿದಿನ ಪ
ಸಾಗಿಬಾಯೆಂದು ಕೂಗಿಕರೆಯಲತಿ-
ವೇಗದಿ ಬರುವ ಚೆನ್ನಾಗಿ ಘನ-
ತ್ಯಾಗಿ ಘನತ್ಯಾಗಿ ವರಯೋಗಿ 1
ದಂಡಕಾಷಾಯಕಮಂಡಲಭೂಷಿತ
ತಂಡತಂಡದ ಸೇವೆಕೊಳುತ ತಾನಿರುತ
ಬಲುಖ್ಯಾತ ಬಲುಖ್ಯಾತ ವರದಾತ 2
ಭವಶರಧಿಗೆ ಅನುಭವನಾವಿಕನಿವ
ಪವನನಯ್ಯನ ಸ್ತುತಿಸುವ ಮನವೀವ
ಅಘತರಿವ ಅಘತರಿವ ತಾ ಪೊರೆವ 3
ತುಂಗಾತಟದಿಹ ಸಂಗೀತಪ್ರಿಯ
ಮಂಗಳಕರ ಮೃದುಹೃದಯ ಕೇಳ್ಮೊರೆಯ
ಘನದಯ ಘನದಯ ಎಮ್ಮದೊರೆಯ 4
ಶ್ರೀಕರವಿಠಲನ ಸ್ವೀಕೃತ ಆಜ್ಞದಿ
ಈ ಕಲಿಯುಗದಿ ತಾ ಬರೆವಸುಕೃತವ
ಮಾಡಿದವ ಮಾಡಿದವ ತಾ ನಂಬುವ 5
***