by ಪ್ರಸನ್ನವೆಂಕಟದಾಸರು
ಆಗಬಲ್ಲದೆ ಹೀಗಾಗಬಲ್ಲದೆಯೋಗಿ
ಜನವಂದ್ಯನವರಿಗ್ಹೀಗೆ ಯಮನ ಮನೆಯ ಬಾಧೆ ಪ.
ಕಾಮನಯ್ಯನರಮನೆಯಪ್ರೇಮದ
ದಾಸಿಗೆ ಮಹಾಪಾಮರರಾಕ್ಷಸ
ಕ್ರೂರಕಾಮುಕರ ಸಂಯೋಗವಾಗಬಲ್ಲದೆ 1
ಸಜ್ಜನರರಸನÀ ಮನೆಯವಜ್ರಪಂಜರದ
ಗಿಣಿಯುಮಜ್ಜಿಗೆ ಕಾಣದ ಮುದಿಮಾರ್ಜಾಲನ
ಬಾಯಿತುತ್ತಿಗಾಗಬಲ್ಲದೆ 2
ರಾಜಾಧಿರಾಜನ ಮನೆಯರಾಜಹಂಸವು
ಕುಣಪಭೋಜಕನಾದ ವೃಕನಭೋಜಕನ
ಅನುಕೂಲವಾಗಬಲ್ಲದೆ 3
ಹರಿಯ ಬೇಂಟೆಯ ಮನೆಯಹರಿಣಗಣಗಳಿಗೆ
ಗಿರಿಯ ಹಳುವದ ಹುಲಿಯಗರಜರದ
ಘಸಣೆಯಾಗಬಲ್ಲದೆ 4
ಪ್ರಸನ್ನವೆಂಕಟನ ಮನೆಯಕಸಕಡ್ಡಿಯೆಲ್ಲವು
ವಜ್ರವಿಷಮ ಯಮಬಂಟರೆಂಬಮುಸಲಕೆ
ಹುಡಿ ಹಿಟ್ಟು ಆಗಬಲ್ಲದೆ 5
******
ಆಗಬಲ್ಲದೆ ಹೀಗಾಗಬಲ್ಲದೆಯೋಗಿ
ಜನವಂದ್ಯನವರಿಗ್ಹೀಗೆ ಯಮನ ಮನೆಯ ಬಾಧೆ ಪ.
ಕಾಮನಯ್ಯನರಮನೆಯಪ್ರೇಮದ
ದಾಸಿಗೆ ಮಹಾಪಾಮರರಾಕ್ಷಸ
ಕ್ರೂರಕಾಮುಕರ ಸಂಯೋಗವಾಗಬಲ್ಲದೆ 1
ಸಜ್ಜನರರಸನÀ ಮನೆಯವಜ್ರಪಂಜರದ
ಗಿಣಿಯುಮಜ್ಜಿಗೆ ಕಾಣದ ಮುದಿಮಾರ್ಜಾಲನ
ಬಾಯಿತುತ್ತಿಗಾಗಬಲ್ಲದೆ 2
ರಾಜಾಧಿರಾಜನ ಮನೆಯರಾಜಹಂಸವು
ಕುಣಪಭೋಜಕನಾದ ವೃಕನಭೋಜಕನ
ಅನುಕೂಲವಾಗಬಲ್ಲದೆ 3
ಹರಿಯ ಬೇಂಟೆಯ ಮನೆಯಹರಿಣಗಣಗಳಿಗೆ
ಗಿರಿಯ ಹಳುವದ ಹುಲಿಯಗರಜರದ
ಘಸಣೆಯಾಗಬಲ್ಲದೆ 4
ಪ್ರಸನ್ನವೆಂಕಟನ ಮನೆಯಕಸಕಡ್ಡಿಯೆಲ್ಲವು
ವಜ್ರವಿಷಮ ಯಮಬಂಟರೆಂಬಮುಸಲಕೆ
ಹುಡಿ ಹಿಟ್ಟು ಆಗಬಲ್ಲದೆ 5
******