..
ಏಳು ಲೋಕದಲಿ ಹೇಳುವರು ಅವರಕೀರ್ತಿಕೇಳಿ ಕೇಳಿ ಬಲ್ಲೆವಮ್ಮ ದೂತೆ ಬಹಳ ಬಹಳ ಭಾಗ್ಯವೇನೆ ದೂತೆ ಹೇಳಲ್ವಶವಲ್ಲವೇನೆ ದೂತೆ ಪ.
ಕೃಷ್ಣನಂಘ್ರಿ ಕಮಲದಲೆ ನಿಷ್ಠನಾಗಿ ಧರ್ಮರಾಯ ಅಷ್ಟು ರಾಜ್ಯನಾಳುವನೇನ ದೂತೆ 1
ದಿಟ್ಟ ಧರ್ಮರಾಯ ದ್ರವ್ಯ ಶ್ರೇಷ್ಟ ದ್ವಿಜರಿಗೆ ಕೋಟಿಕೊಟ್ಟು ಕೊಟ್ಟು ಕಳಿಸೋನೇನೆ ದೂತೆ 2
ಮಾಧವನ ಭಕ್ತರಿಗೆ ಆದರದಿ ದ್ರವ್ಯ ಸಹಿತಗೋದಾನಗಳು ಕೊಡುವೊನೇನೆ ದೂತೆ 3
ನೀಲವರ್ಣನ ಭಕ್ತರಿಗೆ ಸಾಲಿಗ್ರಾಮ ಕೋಟಿ ಲಕ್ಷಮ್ಯಾಲೆ ದ್ರವ್ಯ ಕೊಡುವೋನೇನೆ ದೂತೆ 4
ಶ್ಯಾಮವರ್ಣನ ಭಕ್ತರಿಗೆ ಪ್ರೇಮದಿಂದ ದ್ರವ್ಯ ಸಹಿತ ಭೂಮಿದಾನ ಕೊಡುವೊನೇನೆ ದೂತೆ5
ಪನ್ನಂಗಶಯನನ ಭಕ್ತರ ಮನ್ನಿಸಿ ದ್ರವ್ಯಗಳಿಂದ ಕನ್ಯಾದಾನ ಮಾಡೋನೇನೆ ದೂತೆ 6
ಉತ್ತಮ ದ್ವಿಜರಿಗೆ ರಾಯ ಮುತ್ತು ಮಾಣಿಕರತ್ನ ಸಹಿತಛತ್ರ ಚಾಮರ ಕೊಡುವೋನೇನೆ ದೂತೆ 7
ಆನೆ ಕುದುರೆ ಅಂದಣವು ನಾನಾ ಭೂಷಣಗಳು ವಸ್ತ್ರe್ಞÁನಿಗಳಿಗೆ ಕೊಡುವೊನೇನೆ ದೂತೆ 8
ಸಂಪತ್ತು ದ್ವಿಜರಿಗೆ ಕೊಟ್ಟು ದಂಪತ್ತು ಪೂಜೆಗಳ ಮಾಡಿಗುಂಪು ಗುಂಪು ಕಳುಹೋನೇನೆ ದೂತೆ 9
ಮಿತಿ ಇಲ್ಲದೆ ಅನ್ನ ಮಧ್ವಮತದ ಜನಕೆ ಕೊಟ್ಟುಲಕ್ಷ್ಮೀಪತಿಗೆ ಅರ್ಪಿಸುವನೇನೆ ದೂತೆ 10
ಯದುಪತಿಯ ಭಕ್ತರಿಗೆ ಉದಕ ಪಾತ್ರೆ ಕೊಟ್ಟುರಾಯ ಅಧಿಕ ಕೀರ್ತಿ ಪಡೆಯುವನೇನೆ ದೂತೆ11
ತುಷ್ಟರಾಗಿ ಆಶೀರ್ವಾದ ಕೊಟ್ಟುರಾಯಗೆ ದ್ವಿಜರು ಕೃಷ್ಣಗರ್ಪಿಸೆಂಬೋರೇನೆ ದೂತೆ 12
ರತಿ ಇಟ್ಟು ರಾಮೇಶನಲ್ಲೆ ವ್ರತವ ಕೋಟಿ ಮಾಡಿರಾಯಕೃತ ಕೃತ್ಯನಾಗುವನೇನ ದೂತೆ13
****