Showing posts with label ಭಾರ ನಿನ್ನದು ದೇವಾ ಭಕುತ ಸಂಜೀವಾ kadarundalagihanumaiah. Show all posts
Showing posts with label ಭಾರ ನಿನ್ನದು ದೇವಾ ಭಕುತ ಸಂಜೀವಾ kadarundalagihanumaiah. Show all posts

Tuesday, 3 August 2021

ಭಾರ ನಿನ್ನದು ದೇವಾ ಭಕುತ ಸಂಜೀವಾ ankita kadarundalagihanumaiah

 ..

ಭಾರ ನಿನ್ನದು ದೇವಾ ಭಕುತ ಸಂಜೀವಾ ಪ


ದೂರ ನೋಡದೆ ಪೊರೆಯೊ ದುರಿತಗಳ ತರಿಯೊ ಅ.ಪ.


ಮೂರನೆ ಗುಣದಿಂದ ಮತ್ತನಾಗಿ ಬಹಳ

ಮೂರು ವಿಧ ವಿಷಯದಲಿ ಮಗ್ನನಾದೆ

ಮೂರುಖಾಗ್ರೇಸರಿಗೆ ಮುಂದಾವಗತಿಯೈಯ

ಮೂರಾವತಾರವುಳ್ಳ ಮರುತಾತ್ಮಜನೆ 1


ಆರು ಮೂರರ ದ್ವಾರದ ಸ್ಥಿರದ ಮನೆಯೊಳಗೆ

ಆರು ವೈರಿಗಳು ಕಂಡಾವಾಗಲೂ

ಆರು ಬಿಡಿಸದ ಬವಣೆ ಬಡಿಸುತಲೈದಾವರೆ

ಆರೆರಡು ಪೆಸರುಳ್ಳ ಅಂಜನಾತ್ಮಜನೆ 2


ಪಂಚೇಂದ್ರಿಯಗಳು ಕೂಡೆ ಪರಿಪರಿ ಬಗೆಯಿಂದ

ಪಂಚಮಹಾ ಪಾತಕಕೆ ಎಳೆಯುತಾರೆ

ಪಂಚಕಷ್ಟಕೆ ಗುರಿಯು ಆಗಲಾರೆನು ಪ್ರಾಣ

ಪಂಚಪದಕವೇ Pದರುಂಡಲಗಿ ಹನುಮಯ್ಯ 3

***