Showing posts with label ಳಳ- ಚಿತ್ರ ಗೀತೆ- ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ NEE MUDIDA MALLIGE HOOVINA MAALE. Show all posts
Showing posts with label ಳಳ- ಚಿತ್ರ ಗೀತೆ- ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ NEE MUDIDA MALLIGE HOOVINA MAALE. Show all posts

Monday, 27 December 2021

ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ others NEE MUDIDA MALLIGE HOOVINA MAALE


writer Chi Udayashankar Film 'Gaandhinagara' in 1968

ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ

ನಿನಗೆಂದೇ ಬರೆದ ಪ್ರೇಮದ ಓಲೆ

ಅದು ಓದಲು ಹರಿವುದು ಜೇನಿನ ಹೊಳೆ....

 

ನಾನೋದಿದೆನು ಒಲಿವಿನೋಲೆಯನು

ಮನಸಾರೆ ನಾ ಮುತ್ತನಿತ್ತೆನು

ಹೆಗಲೇರಿಸಿ ನಿನ್ನ ನೆರಳ ಕಂಡೆನು....


|| ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ

ನಿನಗೆಂದೇ ಬರೆದ ಪ್ರೇಮದ ಓಲೆ…||


ನಿನ್ನಾಸೆಯ ನೋಟದ ಕಥೆಯೇನು

ಸೆರೆ ನೀಡದ ಯೌವನ ಜತೆಯೇನು

ನಿನ್ನಾಸೆಯ ನೋಟದ ಕಥೆಯೇನು

ಸೆರೆ ನೀಡದ ಯೌವನ ಜತೆಯೇನು

ಬೆಳದಿಂಗಳ ಹುಣ್ಣಿಮೆ ಮಾತೇನು

ಆ ಹುಣ್ಣಿಮೆ ಮಾತನಾಡಿತು

ನನ್ನ ಕಣ್ಣಲಿ ಮನೆಯ ಮಾಡಿತು

ಸರಿದೋಗುವ ನೆನಪಲಿ ಕೂಡಿ ಆಡಿತು


|| ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ

ನನಗೆಂದೇ ಬರೆದ ಪ್ರೇಮದ ಓಲೆ…||

 

ಮಧುಮಾಸದಿ ಹಾಡುವ ಕೋಗಿಲೆಯ

ಆಕಾಶದಿ ತೂಗುವ ಸಿಹಿ ನುಡಿಯ

ಮಧುಮಾಸದಿ ಹಾಡುವ ಕೋಗಿಲೆಯ

ಆಕಾಶದಿ ತೂಗುವ ಸಿಹಿ ನುಡಿಯ

ಅನುರಾಗದ ಅಲೆಯಲಿ ತೇಲಿ ಹೋಗುವೆ

ತೇಲಾಡುವ ದೋಣಿ ನೀನಾದೆ

ನೀನೋಡುವ ನೋಟಕೆ ಕಣ್ಣಾದೆ

ಅದು ತೋರಿದ ಊರಿಗೆ ಸಾಗಿ ಹೋಗುವೆ..


|| ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ

ನಿನಗೆಂದೇ ಬರೆದ ಪ್ರೇಮದ ಓಲೆ

ಆ ಆ ಆ…ಆ ಆ ಆ……||

***

Ni mudida mallige huvvina male

Ninagende bareda premada oole

Adha oodhalu harivudu jenina hole


Na oodhide valavinooleyanu

Manasaare na mutthanitthenu

Heralerisi ninna nerala kandenu


Ni mudida mallige huvvina male


Ninagende bareda premada oole

Ninnaaseya notada katheyenu

Sere miirada yavvana jathe yenu

Ninnaaseya notada katheyenu

Sere miirada yavvana jathe yenu

Beladingala hunnime maathenu

Aa hunnime maathanaaditu

Nanna kannali maneya maaditu

Sari tuuguva belakali kodiyaaditu


Na mudida mallige huvvina male

Nanagende bareda premada oole


Madhu maasadi haaduva kogileya

Aakashadhe tuuguva sihi nudiya

Madhu maasadi haaduva kogileya

Aakashadhe tuuguva sihi nudiya

Anuragada aleyali teli hoguve

Teladuva doni ninaade

Ni nooduva nootake kannaade

Adhu torida uurige sagi hoguve


Ni mudida mallige huvvina male

Ninagende bareda premada oole

Ahaaaaaaaaa

Ahaaaaaaaaaa

***

NEE MUDIDA MALLIGE HOOVINA MAALE