Showing posts with label ವಂದೇ ಮುಕುಂದ ನಮೊ ನಂದ ಮೂರುತಿ vijaya vittala. Show all posts
Showing posts with label ವಂದೇ ಮುಕುಂದ ನಮೊ ನಂದ ಮೂರುತಿ vijaya vittala. Show all posts

Wednesday, 16 October 2019

ವಂದೇ ಮುಕುಂದ ನಮೊ ನಂದ ಮೂರುತಿ ankita vijaya vittala

ವಿಜಯದಾಸ
ವಂದೇ ಮುಕುಂದ ನಮೊ |
ನಂದ ಮೂರುತಿ ಪರಮಾನಂದ ನರಸಿಂಹಾ ಪ

ಬಿಸಿಜಪೀಠನ ವರವ ಪಡೆದು ಮಹಾರಾಜೇಂದ್ರ |
ವಸುಮತಿಗೆ ತಾನೆ ಸ್ವಾಮಿ ಎಂದು ||
ಹಸುಳೆಯನು ಬಾಧಿಸಲು ಮೊರೆಯಿಡಲಾಕ್ಷಣ |
ಮಿಸಣಿಪ ಕಂಭದಿ ಬಂದ ಭಳಿರೆ ನರಸಿಂಹಾ 1

ರೋಷವನೆ ತಾಳಿ ನಿಟ್ಟುಸುರಗೈಸಿಕೊಳುತಾ |
ಸೂಸಿ ಕಿಡಿಗಳನುದುರೆ ಕುಪ್ಪಳಿಸುತ ಕಮ ||
ಲಾಸನಾದ್ಯರ ಪಾಲಿಸಿದ ನರಸಿಂಹಾ 2

ಅಜವಾಣಿ ನೆಲೆಯಲ್ಲಿ ವಾಸವಾಗಿದ್ದ ನರ |
ಗಜಪಗೀಯ ಮೊಗನೆ ಆನಂದ ಮಗನೇ ||
ಭಜಿಸುವನು ಗತಿ ಕೊಡುವ ಜನಮೇಜಯ ನೃಪವರದ |
ವಿಜಯವಿಠ್ಠಲ ವರದಾತೀರ ನರಸಿಂಹ 3
*********