ankita ವಿಠಲೇಶ
ಮುನೀಂದ್ರಾ ನೋಡಿ ನಲಿದಾಡಿದೆ
ತನುವ ನೀಡಾಡಿ ಮನದಿ ಕೊಂಡಾಡಿ ನೋಡಿ ಪ
ಗುರುರಾಘವೇಂದ್ರಾ ಸುರಮುನಿಚಂದ್ರ
ಕರುಣಕಟಾಕ್ಷದ ಕಾಂತಿಕೋಮಲಾ
ದುರಿತವಿನಾಶಕ ದಿನಕರತೇಜಾ
ಪರಮಪಾವನ ಸಿರಿಗರೆವಮುಖಾಂಬುಜ ನೋಡಿ 1
ಯತಿವರದೇಂದ್ರಾ ಪೃಥಿವಿಸುರೇಂದ್ರಾ
ಹಿತದ ಹಸನ್ಮುಖಜ್ಯೋತಿ ಚಂದಿರಾ
ಪ್ರತಿಭೆಪ್ರಕಾಶದಿ ಕ್ಷಿತಿಗೆ ಶುಭೋದಯ
ನತಜನವಾಂಛಿತ ಪತಿಕರಿಸುವ ಪ್ರಭೆ ನೋಡಿ 2
ರಾಜರಾಜೇಂದ್ರ ರಾಜ್ಯಮಣೀಂದ್ರ
ತೇಜತಪೋಮಯ ಶಾಂತಿಸಾಗರ
ನೈಜದಿ ಶ್ರೀ ವಿಠಲೇಶ ಸುಸನ್ನಿಧಿ
ಯೋಜಿಸಿದೋರ್ವ ಮಹಾತ್ಮ ಪ್ರಸನ್ಮುಖ ನೋಡಿ 3
***
ರಾಗ: ವಿಶ್ರಕಾಪಿ ತಾಳ: ಕವ್ವಾಲಿ (raga tala may differ in audio)