..
Kruti by ಶಿವರಾಮರು Shivaramaru
ಸಖ್ಯವ್ಯಾಕೆ ಮುಖ್ಯ ಸ್ವಹಿತ ಹೇಳದನಕ |ಮಕ್ಕಳು ಯಾಕೆ ಪಿತೃಗಳ ಆಜ್ಞೆಯ ನಡೆಸದನಕ ಪ
ದಾತನ್ಯಾಕೆ ಬಯಕೆ ಪೂರ್ಣ ಮಾಡದನಕ | ಬರಿ |ಮಾತು ಯಾಕೆ ಸ್ಥಿತಿಯ ಲೇಶ ಇಲ್ಲದನಕ 1
ಸಂತನ್ಯಾಕೆ ಶಾಂತಿ ನೆರಳು ಹಿಡಿಯದನಕ | ತನು |ಕಂಥೆಯಾಕೆ ಶಿವಪದಕ್ಕೆರಗೋ ತನಕ 2
ನೇಮವ್ಯಾಕೆ ಹೃದಯ ಶುದ್ಧವಾಗದ ತನಕ | ಶಿವನ |ನಾಮವ್ಯಾಕೆ ನಾಮರೂಪ ಅಳಿಯದ ತನಕ 3
ಮತಿಗಳು ಯಾಕೆ ಶಿವರಾಮ ಪದಕೆ ನಿಲುಕದ ತನಕ | ಹರಿ |ಕಥೆಗಳು ಯಾಕೆ ಪ್ರೇಮ ತುಂಬಿ ತುಳುಕದ ತನಕ 4
ಜಾಣನ್ಯಾಕೆ ಸಮಯ ಉಚಿತ ಅರಿಯದ ತನಕ | ಬರಿಗಾನವ್ಯಾಕೆ ಸ್ವರದ ಲಯವ ಧರಿಸದ ತನಕ 5
ಧರ್ಮವ್ಯಾಕೆ ಸಮಯ ಕಾಲಕ ಒದಗದ ತನಕ | ಸ- |ತ್ಕರ್ಮವ್ಯಾಕೆ ದಂಭತನವು ದಹಿಸದನಕ 6
ಧನ ವಿದ್ದ್ಯಾತಕೆ ಶರಣರಡಿಗೆ ತರದನ್ನಕ | ಈಮನ ವಿದ್ದ್ಯಾಕೆ ತನ್ನ ಉಗಮ ಸೇರದನ್ನಕ7
ಶಿಷ್ಯನ್ಯಾತಕೆ ಗುರುಗಳ ಹೃದಯ ತಿಳಿಯದನ್ನಕ | ಸರಸಭಾಷ್ಯವ್ಯಾತಕೆ ಶ್ರುತಿಯ ಗರ್ಭ ಉಸುರದನ್ನಕ 8
ಜ್ಞಾನವ್ಯಾಕೆ ಜ್ಞೇಯಗುರಿತವರಿಯದನಕ | ಬರಿ |ಧ್ಯಾನವ್ಯಾಕೆ ಚಿತ್ತವೃತ್ತಿ ಮರೆಯ ದನಕ 9
ಆರಾಮವ್ಯಾಕೆ ದುಃಖಸೀಮಿ ದಾಂಟದನಕ | ಶಿ- |ವರಾಮನ್ಯಾಕೆ ಪೂರ್ಣ ಸುಖದೊಳಾಡದ ತನಕ 10
***