Showing posts with label ಇಂದಿರೆ ವಂದೆ ಆನಂದೀ ತುಳಸೀದೇವಿ ನಂಬಿದೆ ಸುರಸುಂದರಿ prasannashreenivasaru. Show all posts
Showing posts with label ಇಂದಿರೆ ವಂದೆ ಆನಂದೀ ತುಳಸೀದೇವಿ ನಂಬಿದೆ ಸುರಸುಂದರಿ prasannashreenivasaru. Show all posts

Thursday, 5 August 2021

ಇಂದಿರೆ ವಂದೆ ಆನಂದೀ ತುಳಸೀದೇವಿ ನಂಬಿದೆ ಸುರಸುಂದರಿ ankita prasannashreenivasaru

..

kruti by prasanna shreenivasaru

ಶ್ರೀ ತುಳಸಿ


ಇಂದಿರೆ ವಂದೆ ಆನಂದೀ ತುಳಸೀದೇವಿ ನಂಬಿದೆ ಸುರಸುಂದರಿ ಪ


ಎಂದೆಂದಿಗೂ ನಾ ನಿನ್ನಧೀನವೆ ಮಾತೆ ಸಿಂಧುಶಯನ

ಪ್ರಿಯೆ ವರದೆ ಆನಂದದೆ ಅ.ಪ


ಆದಿಕಾರಣ ವಿಷ್ಣು ಪ್ರಿಯಳೆ ಶ್ಯಾಮಲೆ ಕೋಮಲೆ

ವಿಧಿಶರ್ವವಂದಿತೆ ವಿದ್ಯಾಧರಾದಿ ಅರ್ಚಿತೆ

ಆದರದಲಿ ನಿನ್ನ ಪಾದಪಂಕಜಗಳ

ಪ್ರತಿದಿನ ಸ್ಮರಿಪೆನೆ ವೃಂದಾವನಸ್ಥಿತೆ ತುಳಸಿ ಸುರೇಶ್ವರಿ1


ಈರಾರು ಅಕ್ಷರ ಮಂತ್ರ ಸುಪ್ರತಿಪಾದ್ಯೆ

ನಾರದನುತೆ ನಾರಾಯಣ ಮನಃಪ್ರಿಯಳೆ

ಘೋರ ಪಾತಕ ಬಹು ಪಾಪಹಾರಿಣಿ ನಿನ್ನ

ಚಾರುಪಾದಗಳಿಗೆ ನಮಿಪೆ ಪೊರೆಯೆ

ಎನ್ನ ವರದೆ ತುಳಸೀದೇವಿ 2


ನಿನ್ನ ಸ್ಮರಣೆ ಮಾಡೆ ಸರ್ವತ್ರ ವಿಜಯವಹುದೆ

ನಿನ್ನ ಸಂದರ್ಶನದಿ ಸರ್ವಪಾಪವು ಪೋಪುವೆ

ಎನ್ನ ಪಾತಕ ತಾಪಾದಿ 1 ಗಳಳಿಯೆ

ಘನ್ನ ಪ್ರಸನ್ನ ಶ್ರೀನಿವಾಸನ ನಿಜಸತಿ ವಿರಜೆ ತುಳಸೀಮಾತೆ 3

***