Showing posts with label ಭಾರತೀ ರಮಣಾ ಪವಮಾನಾ pranesha vittala. Show all posts
Showing posts with label ಭಾರತೀ ರಮಣಾ ಪವಮಾನಾ pranesha vittala. Show all posts

Thursday, 14 November 2019

ಭಾರತೀ ರಮಣಾ ಪವಮಾನಾ ankita pranesha vittala

by ಪ್ರಾಣೇಶದಾಸರು
ಭಾರತೀ ರಮಣಾ ಪವಮಾನಾ ಜಗದೊಳುಸುತ್ರಾಣ|ಘೋರದುರಿತಾರಣ್ಯ ದಹನ |ಮಾರಕದನಜಿತವಾರವಾರಕೆ ಶ್ರೀ ನಾರಾಯಣನ ಪದ ಆರಾಧನೆ ಕೊಡು ಪ

ಮೈಗಣ್ಣಪದವಾಳ್ದವಾತ | ಲೋಕ ವಿಖ್ಯಾತ |ನಾಗಜನಕ ಭಜಕ ಪ್ರೀತ ||ಯೋಗೇಶ ಜಡಜಂಗಮ ವಿತತ | ಅದ್ಭುತ ಚರಿತ |ಬಾಗುವೆ ಲಾಲಿಸೋ ಮಾತ ||ಹೋಗುತಲಿದೆ ಹೊತ್ತೀಗಲೆ | ತವಕದಲಿಭಾಗವತರೊಳಗೆ ||ಭಾಗೀರಥೀ ಪಿತನಾಗುಣಪೊಗಳಿಸೊ |ಜಾಗುಮಾಡದಲೆ |ನಾಗಾದಿ ರೂಪನೆ ಗರುಡಾರ್ಚಿತ 1

ಗೀರ್ವಾಣವಂದ್ಯ ಹರಿದಶ್ವ |ತೇಜಪೃಷದಶ್ವ |ದೂರ್ವಾಸಾರ್ಚಿತಮಾತರಿಶ್ವ||ಪಾರ್ವತೀಪತಿ ವಂದ್ಯ | ದುಸ್ವಭಾವಗತನಭಸ್ವ |ತ್ಪೂರ್ವಿಕಾ ದೇವ ಹಂಸಾಶ್ವ ||ತೋರ್ವುದು ಜ್ಞಾನವ | ಬೀರ್ವುದು ಕರುಣವ |ಪೂರ್ವದೇವ ಸಾರ್ವೆ ನಿನ್ನನು ಯನ್ನ ||ಚಾರ್ವಾಕ ಮತಿಯನು | ಬೇರೂರೆ ಸಳಿಯಾಲು |ಉರ್ವಿಯೊಳಗೆ ಮತ್ತೋರ್ವರ ಕಾಣೆ2

ತ್ರಿಗುಣ ವರ್ಜಿತ | ಪ್ರಾಣೇಶ ವಿಠಲನ ದಾಸ |ನಗಪಾಲಾ ಕೊಡು ಯನಗೆ ಲೇಸ ||ಅಗಣಿತಮಹಿಮನೆ | ಕಾಷಾಯವಸನಭೂಷ |ನಿಗಮವೇದ್ಯನೆ ನಿರ್ದೋಷ ||ನಗಸ್ತೋಮಗಳಿಗೆ | ಪಗೆಯಾಗಿರ್ಪನ |ಮಗನ ಧ್ವಜದಿ ನಿಂದಿ ಗಡಕುರುಜರೆದೆ ||ಭುಗಿಲೆಂಬುವ ತೆರ ಮೃಗಧ್ವನಿ ಮಾಡಿದನಘ |ಪೊರೆವುದುಕರವಮುಗಿವೆ ಚರಣಕೆ 3
********