..
kruti by ವೀರನಾರಾಯಣ Veeranarayana
ಮಾರುತಿ
ನಿಲ್ಲಿಸಯ್ಯ ನಿನ್ನ ಮೂದಲೆ ಮಾರುತಿ ಪ
ನಿಲ್ಲಸಯ್ಯ ನಿನ್ನ ಮೂರುತಿಫುಲ್ಲವಿಸಿದೆ ನಿನ್ನ ಕೀರುತಿಬಲ್ಲಭಕ್ತಿಪಥವ ತೋರುತಿಎಲ್ಲರೊಳಗೆ ಸುಖವ ಬೀರುತಿ ಅ.ಪ.
ಗಾಡಿಕಾರ ರಾಮನನ್ನು ನೋಡಿ ನೋಡಿಯವನ ಮೂರ್ತಿಮೂಡಿನಿಂತ ನಿನ್ನ ಕಣ್ಣ ನೋಡಿ ಧನ್ಯನಪ್ಪೆ ಮೂರ್ತಿ1
ಪ್ರೇಮಭಕುತಿಯಿಂದ ನಿರುತ ರಾಮನನ್ನು ಭಜಿಸಿ ನುಡಿವನಾಮವೆನ್ನ ಪಾಪಿ ಕಿವಿಯ ಧಾಮದಲ್ಲಿ ಸೇರುವಂತೆ 2
ಎನ್ನ ಕಾಡುವಂಥ ದುರಿತವನ್ನು ಸೌಖ್ಯವನ್ನುಇನ್ನು ಕೊಡುವ ನಿನ್ನ ದಿವ್ಯ ಸನ್ನಿಧಿ ತಾನಾಗುವಂತೆ 3
ಧಾರುಣಿಯೊಳು ಗದುಗಿನಲ್ಲಿ ವೀರನಾರಾಯಣನ ಪದವತೋರಿ ನಿತ್ಯ ಸೇವಿಪಂತೆ ಧೀರತೆ ಬರುವಂತೆ ಎನ್ನೊಳು 4
***