Showing posts with label ಸ್ವಾಮಿತ್ವದವರಿಗೆ ಅಯುಕ್ತವೇ ಯುಕ್ತ pranesha vittala. Show all posts
Showing posts with label ಸ್ವಾಮಿತ್ವದವರಿಗೆ ಅಯುಕ್ತವೇ ಯುಕ್ತ pranesha vittala. Show all posts

Monday, 18 November 2019

ಸ್ವಾಮಿತ್ವದವರಿಗೆ ಅಯುಕ್ತವೇ ಯುಕ್ತ ankita pranesha vittala

by ಪ್ರಾಣೇಶದಾಸರು
ಸ್ವಾಮಿತ್ವದವರಿಗೆ ಅಯುಕ್ತವೇ ಯುಕ್ತ |ಶ್ರೀಮನೋರಮನೆ ಪೇಳುವೆ ಕೇಳು ಶಕ್ತ ಪ

ಮಾವನಿಗೇ ಮಾವನಾದೆಯಲೊ ಜನ್ಮಾರಭ್ಯ |ನೀವೊಡಲ ಹೊರದೆ ಚೋರತನ ಮಾಡಿ ||ಕೋವಿದಂಗತಿ ಮೆಚ್ಚು ಜಾರತನ ಮಾಡಿದುದು |ಆ ವನಿತೆ ಮೆದ್ದ ಫಲ ಮೆದ್ದಿ ನಿರ್ದೋಷಿ 1

ನರಸೇವೆಯ ಮಾಡಿ ಪೆಸರಾದಿ ಮಾತೆಯ ಕೊಂದೆ |ಧರೆಯೊಳಗೆ ಮಾತುಲನ ಕೊಲ್ಲಬಹುದೇ ||ತಿರುಕಿ ಬೇಡಿಸುವಳರಸರನ ನಿನ್ನಯ ರಾಣಿ |ಪರಿಮಿತಿಯಿಲ್ಲದ ದುರಾಚಾರಿ ನಿನ್ನಯ ಮಗನು 2

ಮೈದುನನು ಗುರುದ್ರೋಹಿ ಮೊಮ್ಮಗನು ಬಹು ಚಾಡಿ |ಮೇದಿನಿಯೊಳಗೆ ಹೇಳುತಲೆ ತಿರುಗುವ ||ಶ್ರೀದ ಪ್ರಾಣೇಶ ವಿಠ್ಠಲನೇ ನೀನೇ ದೊರೆ |ಯಾದ ಕಾರಣ ದಕ್ಕಿತಿದು ಇಲ್ಲದರೆ ಸಲ್ಲ 3
*******