ಶ್ರೀ ಗುರುಸಾರ್ವಭೌಮರ ಸೇವಾಫಲ
ಇವರ ಸಂದರ್ಶನ ಸ್ವರ್ಗವ ಕಂಡಂತೆ ।
ಇವರ ಪ್ರದಕ್ಷಿಣೆ ವಿಶ್ವ ಪ್ರದಕ್ಷಿಣೆ ।
ಇವರಿಗೆ ಅಭಿಷೇಕ ಸುರ ಸರ್ವರಿಗೆ ಸ್ನಾನ ।
ಇವರಿಗೆ ನಾಮಮುದ್ರೆ ಗಂಧಾಕ್ಷತೆ ಕುಸುಮ ।
ಇವರಿಗೆ ವಸ್ತ್ರಾಲಂಕಾರ ಅನಂತ ಮಹಾಸೇವೆ ।
ಇವರಿಗೆ ಧೂಪಾರ್ತಿ ಸುರಗಣತೆ ಪ್ರಭಾವಾರ್ತಿ ।
ಇವರಿಗೆ ಏಕಾರ್ತಿ ಸರ್ವತ್ರ ಹರಿಗಾರ್ತಿ ।
ಇವರಿಗೆ ನೈವೇದ್ಯ ಅನಂತ ಯಜ್ಞಫಲ ।
ಇವರಿಗೆ ಹಸ್ತ ಪ್ರಕ್ಷಾಲ್ಪನೆ ಅವಭೃತಕೇ ಸಮವು ।
ಇವರಿಗೆ ಮಂಗಳಾರ್ತಿ ತಾಂಬೂಲ ದಕ್ಷಿಣವು ।
ಇವರಿಗೆ ಪಾದೋದಕವು ಪರಮ ಪಾವನವು ।
ಇವರ ಮಂತ್ರಾಕ್ಷತೆ ಫಲವು ಕೈವಲ್ಯವು ।
ಇವರ ಅಂತರ್ಯಾಮಿ ರಘುಪತಿ ರಾಮಚಂದ್ರನು ।
ಕನಕಾದ್ರಿ ವಿಠಲನು ವಿವರದಿ ಸೇವೆಗೊಂಡು ।
ಇವರ ದ್ವಾರ ಅನಂತ ಫಲವೀವ ।।
***
Śrī gurusārvabhaumara sēvāphala
ivara sandarśana svargava kaṇḍante।
ivara pradakṣiṇe viśva pradakṣiṇe।
ivarige abhiṣēka sura sarvarige snāna।
ivarige nāmamudre gandhākṣate kusuma।
ivarige vastrālaṅkāra ananta mahāsēve।
ivarige dhūpārti suragaṇate prabhāvārti।
ivarige ēkārti sarvatra harigārti।
ivarige naivēdya ananta yajñaphala।
ivarige hasta prakṣālpane avabhr̥takē samavu।
ivarige maṅgaḷārti tāmbūla dakṣiṇavu।
ivarige pādōdakavu parama pāvanavu।
ivara mantrākṣate phalavu kaivalyavu।
ivara antaryāmi raghupati rāmacandranu।
kanakādri viṭhalanu vivaradi sēvegoṇḍu।
ivara dvāra ananta phalavīva।।
***