Showing posts with label ಕುರುಣಾವಾರುಧೀಶ ಭಾರತೀಶ ಕರಪಿಡಿದು ಕಾಪ್ಯಾಡೊ ಕೊರವಿಯ ವಾಸ shyamasundara. Show all posts
Showing posts with label ಕುರುಣಾವಾರುಧೀಶ ಭಾರತೀಶ ಕರಪಿಡಿದು ಕಾಪ್ಯಾಡೊ ಕೊರವಿಯ ವಾಸ shyamasundara. Show all posts

Wednesday, 1 September 2021

ಕುರುಣಾವಾರುಧೀಶ ಭಾರತೀಶ ಕರಪಿಡಿದು ಕಾಪ್ಯಾಡೊ ಕೊರವಿಯ ವಾಸ ankita shyamasundara

 

ಕುರುಣಾವಾರುಧೀಶ ಭಾರತೀಶ

ಕರಪಿಡಿದು ಕಾಪ್ಯಾಡೊ ಕೊರವಿಯ ವಾಸ ಪ


ಭಜಿಸುವವರಿಗೆ ಅಮರ ಕುಜವು ನೀನೆಂದೆನುತ

ಸುಜನರೆನ್ನಗೆ ಹಿಂದೆ ಸೂಚಿಸಿದ್ದರೊ ದ್ವಿಜ ಕುಲಾರ್ಚಿತ ಇಂದು

ನಿಜವಾಯ್ತು ಆ ಮಾತು ಅಜಪದಾರ್ಹನೆ

ನಿನ್ನ ಭಕುತರಲ್ಲಿಡು ಎನ್ನ 1


ದಂತಿಪುರಪತಿಗೆ ಕೃತಾಂತನೆನಿಸಿದ ಧೀರ |

ವಿಂತು ಪೊಗಳಲಿ ನಿನ್ನ ಮಹಿಮೆಯನು

ಕುಂತಿಜನೆ ತವನಾಮ ಚಿಂತಿಯನು

ಸಂತತದಲಿ ಸಲಹೋ ಧೀಮಂತ ನಂಬಿದೆ ಪರಮಾ 2


ಕಾಮಾರಿಸುತ ನಮೊ ಸೋಮಕುಲಭವ ಭೀಮ |

ಶ್ರೀಮಧ್ವಮುನಿನಾಥವರ ಪ್ರದಾತ

ಭೂಮಿಜಾತೆಯ ಪ್ರವೀತ ಶಾಮಸುಂದರದೂತ

ಸ್ವಾಮಿಗುರು ತವನಾಮ ಸ್ಮರಿಪೆ ಘುನ್ನ 3

***