ಹರಪನಹಳ್ಳಿ ಭೀಮವ್ವನವರ ರಚನೆ...
ರಾಮ ರಾಮ ಶ್ರೀ ರಘುರಾಮ
ನೀಲಮೇಘಶ್ಯಾಮ ನಿಸ್ಸೀಮ|
ಕಾಮಿತಾರ್ಥವಕರೆದತಿ
ಪ್ರೇಮದಿಂದ ಪಾಲಿಸುವುದು ನಿನ್ನ ನಾಮ ||ಪ||
ಕಲ್ಲೋದ್ಧಾರಕ ಕರುಣಾಳು ರಾಮ|
ಬಿಲ್ಲನೆತ್ತಿದ್ದ ಬಿರುದಾತ ರಾಮ|
ಸೊಲ್ಲು ಸೊಲ್ಲಿಗಿರಲು ಹರಿನಾಮ|
ಚೆಲ್ಲ್ಯಾಡುವ ದಯ ಅವರಲ್ಲಿ ಪ್ರೇಮ ||೧||
ಧೀರಪುರುಷನೆ ದಿಗ್ವಿಜಯ ರಾಮ|
ವಾರಿಧಿಯ ಕಟ್ಟಿದ್ವನಜಾಕ್ಷ ರಾಮ|
ಕ್ರೂರರಾಕ್ಷಸರನು ಕೊಂದು ಲಂಕಾ
ಸೂರೆಯನು ಮಾಡಿದಂಥ ನಿಸ್ಸೀಮ ||೨||
ದುಷ್ಟರಾವಣಶತ್ರು ಶ್ರೀರಾಮ|
ಹುಟ್ಟಿ ಭಾನುವಂಶದಿ ಸೀತಾರಾಮ|
ಮುಟ್ಟಿಭಜಿಸೆ ಸಜ್ಜನರಿಗೆ ಭೀಮೇಶ ಧಾಮ ||೩||
*********