Showing posts with label ಬಂದಾ ಶ್ರೀ ರಾಘವೇಂದ್ರ ಭಕುತರ ಪೊರೆವ lakumeesha. Show all posts
Showing posts with label ಬಂದಾ ಶ್ರೀ ರಾಘವೇಂದ್ರ ಭಕುತರ ಪೊರೆವ lakumeesha. Show all posts

Monday, 6 September 2021

ಬಂದಾ ಶ್ರೀ ರಾಘವೇಂದ್ರ ಭಕುತರ ಪೊರೆವ ankita lakumeesha

 ankita ಲಕುಮೀಶ 

ರಾಗ: [ಕಮಾಚ್] ತಾಳ: [ಆದಿ]


ಬಂದಾ ಶ್ರೀ ರಾಘವೇಂದ್ರ ಭಕುತರ ಪೊರೆವ 


ಬಂದಾ ಭಕುತರ ಪಾಪವೃಂದವ ಕಳೆದು ಆನಂದ

ನಂದನತೋರಿ ನಂದವಗರೆವ ಗುರು  ಅ ಪ


ಧರೆಯ ಚೋರಾರಿ ಸುತೆಯಾದ ತುಂಗಾನದಿಯ 

ತೀರದಿ ರಾಜಿಪ ವರ ಮಂತ್ರಸದನದಿ ಹರಿಯ ಧ್ಯಾನಿಸುತ 

ನೆರೆನಂಬಿ ತುತಿಪರ ಕರುಣಾದಿ ಪೊರೆಯಲು  1

ದುರಿತವೆಂಬುವ ಸರ್ಪಕೇ ಗುರುರಾಜಾ

ಗರುಡನೆಂದರಿಯೋ ಮನುಜ ಮರೀಯದವರ

ಚರಣವಾರಿಜಗಳ ಸ್ಮರಿಸುವರಾ ಭವಶರಧಿ ದಾಟಿಸಲೀಗಾ  2

ತನಯರಿಲ್ಲದ ಜನರು ಯತಿರಾಜರ

ಮನಮುಟ್ಟಿ ಸೇವಿಸಲು ಘನತನಯರ ಇತ್ತು ಅನು-

ದಿನ ರಕ್ಷಿಸಿ ಇನಕುಲೇಶನ ಒಲಿಸಿ ಹನುಮನಾವೇಶದಿ  3

ಹಲವು ಕ್ಷೇತ್ರಗಳೇತಕೇ ಎಲೆ ಮರುಳೇ 

ಸುಲಭ ಮುಕ್ತಿಗೆ ಈತನು ಒಲಿಯುತ ನಲಿಯುತ 

ಫಲನೀವ ಸುರತರು ಸುಜನರಭೀಷ್ಟ ಫಲವೀವ ಓಡ್ಯೋಡಿ  4

ಶ್ರೀಸುಯಮೀಂದ್ರಯತಿವರ ತಪಸಿಗೆ ಮೆಚ್ಚಿ

ನಸುನಗುತಲಿ ಒಲಿದು ರಾಶಿಮಹಿಮೆ ಪ್ರಕಾಶದಿ ತೋರುತ 

ಬಿಸಜಾಕ್ಷ ಲಕುಮೀಶ ವಾಸುದೇವನ ಧ್ಯಾನದಿ  5

***