Showing posts with label ಏನ ಬೇಡಲೊ ನಿನ್ನ ದೇವಾಧಿ ದೇವ ಏನಹುದೊ ನಿನ್ನೊಳಗೆ ಮಹಾನುಭಾವ shree krishna. Show all posts
Showing posts with label ಏನ ಬೇಡಲೊ ನಿನ್ನ ದೇವಾಧಿ ದೇವ ಏನಹುದೊ ನಿನ್ನೊಳಗೆ ಮಹಾನುಭಾವ shree krishna. Show all posts

Wednesday, 1 September 2021

ಏನ ಬೇಡಲೊ ನಿನ್ನ ದೇವಾಧಿ ದೇವ ಏನಹುದೊ ನಿನ್ನೊಳಗೆ ಮಹಾನುಭಾವ ankita shree krishna

 ..

ಏನ ಬೇಡಲೊ ನಿನ್ನ ದೇವಾಧಿ ದೇವ ಪ


ಏನಹುದೊ ನಿನ್ನೊಳಗೆ ಮಹಾನುಭಾವ ಅ.ಪ


ಮನೆಯ ಬೇಡಲೆ ವನಧಿ ಹಾಸಿಗೆಯು ವಟಪತ್ರವನಿತೆಯರ ಬೇಡಲೆ ಬ್ರಹ್ಮಚಾರಿಘನ ಸಖ್ಯವನು ಬಯಸೆ ನೆನೆಯುವರ ಮನದಲಿಹೆತಿನುವುದಕೆ ಕೇಳುವೆನೆ ನವನೀತಚೋರ 1


ಒಡವೆಗಳ ಬಯಸೆ ಶಿಖಿಪಿಂಛ ತುಳಸಿ ಪತ್ರಕಡು ಸೈನ್ಯವನೆ ಬಯಸೆ ಗೋಪಾಲನುಬಿಡದೆ ರೂಪವÀ ಬಯಸೆ ನೀಲಮೇಘಶ್ಯಾಮಉಡುವುದಕೆ ಕೇಳುವೆನೆ ಸ್ತ್ರೀವಸನ ಚೋರ 2


ಶಕ್ತಿಯನು ಗೋಪಿಕಾ ಸ್ತ್ರೀಯರಲಿ ವ್ರಯಗೈದೆಭಕ್ತಿಯನು ಸತ್ಯವಂತರಿಗಿತ್ತಿಹೆಭಕ್ತರನು ವಂಚಿಸುತ ನೀನು ಬಚ್ಚಿಟ್ಟಿರುವಮುಕ್ತಿ ಕಾಂತೆಯ ಕೊಡು ಸುಖಿಪೆನೊ ಶ್ರೀಕೃಷ್ಣ3

***