Showing posts with label ಅರಿಕುಕೊಳ್ಳಿರೈಯ್ಯಾ ನೀವು ಹರಿಯ ನಾಮಾವೃತ ಗುರ್ತು ಮಾಡಿ mahipati. Show all posts
Showing posts with label ಅರಿಕುಕೊಳ್ಳಿರೈಯ್ಯಾ ನೀವು ಹರಿಯ ನಾಮಾವೃತ ಗುರ್ತು ಮಾಡಿ mahipati. Show all posts

Wednesday, 1 September 2021

ಅರಿಕುಕೊಳ್ಳಿರೈಯ್ಯಾ ನೀವು ಹರಿಯ ನಾಮಾವೃತ ಗುರ್ತು ಮಾಡಿ ankita mahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಅರಿಕುಕೊಳ್ಳಿರೈಯ್ಯಾ ನೀವು ಹರಿಯ ನಾಮಾವೃತ ಗುರ್ತು ಮಾಡಿಕೊಡುವ ಪೂರ್ಣ ಸದ್ಗುರು ಸಮರ್ಥ P

ಒಳ್ಳೆಒಳ್ಳೆವರು ಬಂದು ಕೇಳಿರೊ ನೀವಿನ್ನು ತಿಳದುಕೊಳ್ಳಿ ಇದಕೆ ಬೀಳುವದಿಲ್ಲಾ ಹಣಹೊನ್ನು ಉಳ್ಳ ಬುದ್ಧಿಯಿಂದ ನೀವು ತೆರೆದುನೋಡಿ ಕಣ್ಣು ಕೊಳಲರಿಯದವನ ಬಾಯಾಗ ಬೀಳುದು ಮಣ್ಣು 1

 ಬ್ರಹ್ಮಸುಖ ಇದೇ ಇದೇ ನೋಡಿರೋ ಸಾಕ್ಷಾತ ತುಂಬಿ ತುಳಕುತ್ತ ಒಮ್ಮನ ಮಾಡಿಕೊಂಡು ಬಂದು ಕೊಳ್ಯಮೃತ ನೇಮದಿಂದ ಕೊಳ್ಳಲಿಕ್ಕೆ ದೋರುದು ಸ್ವಹಿತ 2 

ಇಹಪರ ನಾರ್ಥಕಿದೆ ಕೇಳಿರೋ ನೀವೆಲ್ಲ ದೇಹ ಅಭಿಮಾನಿಗಿದು ಸಾದ್ಯವಾಗುವುದಿಲ್ಲ ಸೋಹ್ಯವರಿತು ಸೂರೆಗೊಂಡು ಮಹಿಮ ತಾನೆ ಬಲ್ಲಗುಹ್ಯವಾಕ್ಯ ತಿಳಿದುನೋಡಿ ಮಹಿಪತಿ ಸೊಲ್ಲಾ 3

***