ಸಾರಂಗ ರಾಗ , ಕೇರವಾ ತಾಳ
ಶರಣು ಶರಣು ಶರಣು
ದೇವಾದಿಗಳೊಂದಿತನಹುದೋ ಸ್ವಾಮಿ ಗಣನಾಥಾ ||ಪ||
ಅಖಿಳಭುವನದೊಳು ಪೂಜಿತಾ
ಭಕುತಜನಕೆ ನೀ ಸಾಕ್ಷಾತಾ
ಸಕಲವಿದ್ಯಾವರದಾತಾ
ಶಕುತನಹುದಯ್ಯಾ ಪ್ರಖ್ಯಾತ ||೧||
ಶುದ್ಧಬುದ್ಧರ ಸಹಕಾರಾ
ಬುದ್ಧ ಈವ ಘನ ಉದಾರಾ
ರಿದ್ಧಿ ಸಿದ್ಧಿಗಾಗಿಹೆ ನೀ ಆಧಾರಾ
ಸಿದ್ಧಿದಾಯಕ ವಿಘ್ನಹರಾ ||೨||
ಜನಕೆ ಮಾಡುವ ದೋಷನಾಶಾ
ಅನುದಿನವು ಮತಿಪ್ರಕಾಶಾ
ದೀನ ಮಹೀಪತಿಯಾ
ಮನೋಭಾವಪೂರಿತಾ ||೩
********
ಶರಣು ಶರಣು ಶರಣು
ದೇವಾದಿಗಳೊಂದಿತನಹುದೋ ಸ್ವಾಮಿ ಗಣನಾಥಾ ||ಪ||
ಅಖಿಳಭುವನದೊಳು ಪೂಜಿತಾ
ಭಕುತಜನಕೆ ನೀ ಸಾಕ್ಷಾತಾ
ಸಕಲವಿದ್ಯಾವರದಾತಾ
ಶಕುತನಹುದಯ್ಯಾ ಪ್ರಖ್ಯಾತ ||೧||
ಶುದ್ಧಬುದ್ಧರ ಸಹಕಾರಾ
ಬುದ್ಧ ಈವ ಘನ ಉದಾರಾ
ರಿದ್ಧಿ ಸಿದ್ಧಿಗಾಗಿಹೆ ನೀ ಆಧಾರಾ
ಸಿದ್ಧಿದಾಯಕ ವಿಘ್ನಹರಾ ||೨||
ಜನಕೆ ಮಾಡುವ ದೋಷನಾಶಾ
ಅನುದಿನವು ಮತಿಪ್ರಕಾಶಾ
ದೀನ ಮಹೀಪತಿಯಾ
ಮನೋಭಾವಪೂರಿತಾ ||೩
********