RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ಸದ್ಗುರುವೆ ನಿಮ್ಮ ಪಾದಕಮಲಕೆರಗುವೆ ಪ
ಹಿಂಡುದೈವಕೆ ಪ್ರಚಂಡಮೂರ್ತಿ ಕೊಂಡಾಡುವ ನಿಮ್ಮ ಅಖಂಡ ಕೀರ್ತಿ 1
ಭಾವಭೋಕ್ತ ದೇವೋತ್ತಮ ಸೇವಿಸುವೆ ನಿಮ್ಮ ದಿವ್ಯನಾಮ 2
ಜಯ ಜಯ ಆನಂದ ಕಂದ ಧ್ಯಾಯಿಸುವೆ ನಿಮ್ಮ ಪಾದಾರವಿಂದ 3
ದಯಾಸಿಂಧು ದೇವ ದೇವ ಕಾಯೋ ಮಹಿಪತಿ ಪ್ರಾಣಜೀವ 4
***