Showing posts with label ಮನಾ ಮನಾ ಘನಾ ಘನಾ ಎನುತಿದೆ ಲೋಕರಿಯದೆ ಖೂನ mahipati. Show all posts
Showing posts with label ಮನಾ ಮನಾ ಘನಾ ಘನಾ ಎನುತಿದೆ ಲೋಕರಿಯದೆ ಖೂನ mahipati. Show all posts

Wednesday, 1 September 2021

ಮನಾ ಮನಾ ಘನಾ ಘನಾ ಎನುತಿದೆ ಲೋಕರಿಯದೆ ಖೂನ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಮನಾ ಮನಾ ಘನಾ ಘನಾ ಎನುತಿದೆ ಲೋಕರಿಯದೆ ಖೂನ ಪ  


ಮನದಾವದು ಎಂದರಿಯದೆ ಖೂನ ಘನದಾವವೆಂದರಿಯದು ಧ್ಯಾನ ಧ್ಯಾನ ಮೋನ ಯಾತಕದೇನ ಅನುಭವರಿಯದೆ ಮರುಳಜನ 1 

ಮೂಲದಲಿಡದೆ ಠಾವಿಲಿ ಮನ ಜ್ಯಾಲವ್ಯಾತಕೆ ಬರೇ ಮಾತಿನ ಕೀಲ ತಿಳಿಯದೆ ಸದ್ಗುರು ಜ್ಞಾನ ನೆಲಿಯುಗೊಂಬುದೆ ನಿಜಸಾಧನ 2 

ಮನದಲಿ ಮನಸಿನ ತಿಳಿವದು ಬಿಟ್ಟು ಜನವನ ತಿರುಗುದೆ ಕೆಟ್ಟು ಮನೋನ್ಮನದೊಳಗಿದೆ ಘನಗುಟ್ಟುದೀನ ಮಹಿಪತಿ ಗುರು ದಯಲುಂಟು3

***