ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಕೃಷ್ಣನಾ ಚರಣಾ ನಂಬಿ ಭಜಿಸುವುದು ಬಲು ಲೇಸು ಪ
ಭಾವನೆ ದೇವಕಿ ಉದರದಿ ಬಂದಾ| ದೇವ ಹೃದಯ ಗೋಕುಲದಲಿ ಬೆಳೆದಾ| ಅವಿದ್ಯ ಪೂತನಿಯನು ಕೊಂದಾ 1
ಭವರೂಪದ ಸಗಟಾಸೂರನೊದೆದಾ| ಅವಗುಣಿಬಕ ಕೇಶಾದ್ಯರ ತರಿದಾ| ಅವಿವೇಕಿ ಕಾಳಿಂಗನ ತುಳಿದಾ 2
ಭಕ್ತಿಯ ಗೋರಸ ಕಳವಿಲಿ ಸುರಿದಾ| ಮುಕ್ತಾಂಗದ ಗೋಪೀಜನ ನೆರೆದಾ| ಸಕ್ತಿಯ ಗೋವರೋಳು ನಲಿದಾ3
ಭ್ರಾಂತಿಯ ಹಮ್ಮಿನ ಕಂಸನ ಬಡಿದಾ| ಸ್ವಾಂತ ಸುಖ ದ್ವಾರಕೆಯಲಿ ನಿಂದಾ| ಶಾಂತಿಯ ರುಕ್ಮಿಣಿ ಕೈವಿಡಿದಾ 4
ತಂದೆ ಮಹಿಪತಿ ಗುರುವಾದಾ ಕಂದುದ್ಧವನನು ತೋರಿಸಿ ಹೊರೆದಾ| ಛಂದದಿ ಪಾದುಕವಿತ್ತನು ಪದದಾ 5
***