ನೆನೆಸಿ ನೆನೆಸಿ ನಗುವರಮ್ಮಯ್ಯಮನಸಿಜನಯ್ಯನ ಮಿತ್ರಿ ಧೇನಿಸಿಧೇನಿಸಿ ಹೇಳಿ ಬರೆಸಿದ ಚಿತ್ತಾರವ ಕಂಡು ನೆನೆಸಿ ನೆನೆಸಿ ನಗುವರಮ್ಮ ಪ.
ಅತ್ತಿಗೆಯರು ಕುಳಿತಲ್ಲೆ ಅರ್ಥಿಯ ನೋಡುವ ಬರೆಬತ್ತಲೆ ಗೊಂಬೆ ಬಗೆ ಬಗೆ ಬತ್ತಲೆ ಗೊಂಬೆ ಬಗೆ ಬಗೆ ಕುಶಲರ್ಥಚಿತ್ತಾರವ ಯಾರು ಬರೆಸಿಹರು 1
ಜಾತಿ ಹಂಸ ಪಕ್ಷಿಗಳು ಮಾತಿನ ಗಿಳಿವಿಂಡುನೂತನ ನವಿಲು ಬರೆಸಿಲ್ಲನೂತನ ನವಿಲು ಪಕ್ಷಿ ಬರೆಸಿಲ್ಲಹನುಮನೆಂಬೊ ಕೋತಿ ಯಾಕೆ ಬರೆಸಿಹರು2
ಗಂಡ ಭೇರುಂಡ ಮೃಗವ ತಿದ್ದಿ ತಾನುಬರೆಸಿಲ್ಲ ಬಿದ್ದು ಜನರೆಲ್ಲ ನಗುವಂತೆ ಬಿದ್ದು ಜನರೆಲ್ಲ ನಗುವಂತೆ ತಾನುಮುದಿಹದ್ದ ಯಾಕೆ ಬರೆಸಿಹರು 3
ಎಂಟು ದಿಕ್ಕಿಗೊಪ್ಪೊ ಬಂಟರ ಬರೆಸಿಲ್ಲಕುಂಟ ಸಾರಥಿಯ ವಶವಾಗಿ ಕುಂಟ ಸಾರಥಿಯ ವಶವಾಗಿ ತಿರುಗಾಡುವ ಸೊಟ್ಟ ಸೂರ್ಯನ ಚಿತ್ತಾರ ಬರೆಸಿಹರು 4
ಸುಂದರ ಸುಂದರ ವೃಂದಾರಕರನೆಲ್ಲ ಬಿಟ್ಟುಬಂದ ಜನರೆಲ್ಲ ನಗುವಂತೆ ಬಂದ ಜನರೆಲ್ಲ ನಗುವಂತೆ ಕಳೆಗುಂದಿದಚಂದ್ರನ ಚಿತ್ತಾರ ಬರೆಸಿಹರು 5
ರೂಢಿಗೊಡೆಯನ ಮನೆಯ ಗೋಡೆ ಮ್ಯಾಲಿನ ಗೊಂಬೆ ನೋಡಿದವರೆಲ್ಲ ನಗುವಂತೆನೋಡಿದವರೆಲ್ಲ ನಗುವಂತೆ ತಾತನ ಕೋಡು ಇಲ್ಯಾಕೆ ಬರೆಸಿಹರು 6
ಚೆನ್ನ ರಾಮೇಶನ ಹೊನ್ನ ಗೋಡೆಯ ಮ್ಯಾಲೆ ಮುನ್ನೆ ಜನರೆಲ್ಲ ನಗುವಂತೆ ಮುನ್ನೆ ಜನರೆಲ್ಲ ನಗುವಂತೆ ರುಗ್ಮನ ಪನ್ನಿ ವಿಸ್ತಾರ ಬರೆಸಿಹರು ಚಿತ್ತಾರ 7
****