Showing posts with label ತುಳಸಿದೇವಿ ಪದಕೇ ನಾರೇರು ಬೆಳಗಿರಿ ಆರುತಿಯಾ govinda vittala aarati. Show all posts
Showing posts with label ತುಳಸಿದೇವಿ ಪದಕೇ ನಾರೇರು ಬೆಳಗಿರಿ ಆರುತಿಯಾ govinda vittala aarati. Show all posts

Tuesday, 13 April 2021

ತುಳಸಿದೇವಿ ಪದಕೇ ನಾರೇರು ಬೆಳಗಿರಿ ಆರುತಿಯಾ ankita govinda vittala aarati

 ತುಳಸಿದೇವಿ ಪದಕೇ | ನಾರೇರು | ಬೆಳಗಿರಿ ಆರುತಿಯಾ ಪ


ಬೆಳಗುವುದೂ ನಮ್ಮ | ಅಳಗಿರಿ ರಂಗನಲಲನೆ ಶ್ರೀ ತುಳಸಿಗೆ | ಕಲಿಮಲ ಹಾಗೆ ಅ.ಪ.


ದಳಪ್ರತಿ ದಳದಲ್ಲಿ | ಶ್ರೀಹರಿ | ನೆಲಸಿಹ ತಾನಲ್ಲಿಒಲಿಮೆಲಿ ಭಕುತರ | ಹಲವು ಸೇವೆಗಳಿಗೊಲಿದು ಅಭೀಷ್ಟವ | ಸಲಿಸುವ ದೇವಿಗೆ 1


ಶರದಿ ಮಥಿಸೆ ಅಮೃತ | ಕಲಶವ | ಧರಿಸುತ ಧನ್ವಂತ್ರಿಬರಲು ನಯನದಿಂ | ಮರುಳೆ ಆನಂದಕೆವರ ಬಿಂದೋದ್ಭವೆ | ಹರಿ ಪ್ರಿಯೆ ತುಳಸೀ 2


ಜಾಂಬುವತಿಯು ದೇವಿ | ನಿನ್ನಲಿ | ಇಂಬು ತೋರಿ ಇರಲುಅಂಬುಜಾಕ್ಷ | ಗುರು ಗೋವಿಂದ ವಿಠಲನ |ತುಂಬಿ ದ್ವೈಭವದಿ | ಸಂಭ್ರಮ ಸೇವಿಪ 3

***

ನಮಸ್ತುಳಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |

ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ ||

ಯನ್ಮೂಲೆ ಸರ್ವತೀರ್ಥಾನೀ ಯನ್ಮದ್ಧ್ಯೇ ಸರ್ವದೇವತಾ |

ಯದಗ್ರೇ ಸರ್ವವೇದಾಶ್ಚ ತುಳಸೀ ತ್ವಾಂ ನಮಾಮ್ಯಹಮ್ ||

***