RAO COLLECTIONS SONGS refer remember refresh render DEVARANAMA
ಸಾಧು ಸಂಗತಿ ಮಾಡೋ ಎಲೆ ಮನಾ
ಸಾಧು ಸಂಗತಿ ಮಾಡು ಪ
ಘೋರತರದ ಸಂಸಾರ ಸಾಗರದಿ
ಪಾರು ಮಾಡಿ ಮುರಾರಿಯ ಸ್ಮರಿಸುವ 1
ಕರ್ಮಫಲಾಪೇಕ್ಷಿಸದಲೇ ಮಾಡಿ ತಾ
ನಿರ್ಮಲ ಚಿತ್ತದಿ ಹರಿಯನು ಪೊಗಳುವಾ 2
ತನ್ನ ಪಿತ ಹನುಮೇಶವಿಠಲಗೆ ಆತ್ಮಅರ್ಪಿಸಿ
ಕೃತಾರ್ಥನಾದನು ಸಾಧು ಸಂಗತಿ ಮಾಡೋ 3
****