Tuesday 1 June 2021

ಸಾಧು ಸಂಗತಿ ಮಾಡೋ ಎಲೆ ಮನಾ ಸಾಧು ಸಂಗತಿ ಮಾಡು ankita hanumesha vittala

ಸಾಧು ಸಂಗತಿ ಮಾಡೋ ಎಲೆ ಮನಾ

ಸಾಧು ಸಂಗತಿ ಮಾಡು ಪ


ಘೋರತರದ ಸಂಸಾರ ಸಾಗರದಿ

ಪಾರು ಮಾಡಿ ಮುರಾರಿಯ ಸ್ಮರಿಸುವ 1


ಕರ್ಮಫಲಾಪೇಕ್ಷಿಸದಲೇ ಮಾಡಿ ತಾ

ನಿರ್ಮಲ ಚಿತ್ತದಿ ಹರಿಯನು ಪೊಗಳುವಾ 2


ತನ್ನ ಪಿತ ಹನುಮೇಶವಿಠಲಗೆ ಆತ್ಮಅರ್ಪಿಸಿ

ಕೃತಾರ್ಥನಾದನು ಸಾಧು ಸಂಗತಿ ಮಾಡೋ 3

****


No comments:

Post a Comment