ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಭಾಸ್ಕರ ಪುಣ್ಯ ಪ್ರಭೆಯ ಕೂಡಿ P
ಪುಣ್ಯ ಎದುರಿಟ್ಟು ಬಂದು ಮುಂದೆ ಕಣ್ಣಾರೆ ಕಂಡು ತ್ರಾಹಿ ಎಂದೆ ಸಣ್ಣ ದೊಡ್ಡದರೊಳು ವಸ್ತು ಒಂದೆ ಬಣ್ಣ ಬಣ್ಣಾ ಗೀಹ್ಯದರಿಂದೆ 1
ಹೇಳಬಾರದಯ್ಯ ನಿಜವರ್ಮ ಕೇಳಿ ಶ್ರೀಸದ್ಗುರು ಪಾದಧರ್ಮ ಅಳಿಯಿತು ನೋಡಿ ಪೂರ್ವ ಕರ್ಮ ಹೊಳಿಯಿತೆನ್ನೊಳು ಘನ ಬ್ರಹ್ಮ 2
ಸೋಹ್ಯ ದೋರಿ ಕೊಟ್ಟೆನಗಿಂದು ಮಹಿಪತಿಸ್ವಾಮಿ ತಾನೆ ಬಂದು ಈಹ್ಯಪರ ಪೂರ್ಣ ಕೃಪಾಸಿಂಧು ಸಾಹ್ಯ ಮಾಡುತೀಹ್ಯ ದೀನ ಬಂಧು 3
***