ಕೇಳೆಲೊವಾದಿ ಕೇಳೆಲೊವಾದಿಕೇಳದಿದ್ದರೆ ತಮಸಿಗೆ ಹೋದಿ ಪ.
ಅತ್ತೆಸೊಸೆ ಒಂದೆ ಮಕ್ಕಳು ಮರಿಯೊಂದೆಹೆತ್ತಮ್ಮನೊಂದೆ ಮಡದಿಯೊಂದೆ ಹೆತ್ತಮ್ಮ ಒಂದೆ ಮಡದಿಒಂದೆಯಾದರೆವಿತ್ತವೆಚ್ಚಾಗಿ ಮದುವೆಯಾಕೆ1
ಅಕ್ಕ ತಂಗಿಯೊಂದೆ ಮಕ್ಕಳು ಸೊಸೆಯೊಂದೆಚಿಕ್ಕಮ್ಮನೊಂದೆ ಮಡದಿಒಂದೆಚಿಕ್ಕಮ್ಮನೊಂದೆ ಮಡದಿಒಂದೆಯಾದರೆವಿತ್ತವೆಚ್ಚಾಗಿ ಮದುವೆ ಯಾಕೆ2
ಆಳು ಅರಸು ಒಂದೆ ಕೋಳಿ ಕೋಗಿಲ ಒಂದೆಮಾಳಿಗೆ ಒಂದೆ ಬಯಲೊಂದೆಮಾಳಿಗೆ ಒಂದೆ ಬಯಲೊಂದೆಯಾದರೆಮಾಳಿಗೆ ಮನೆಯು ನಿನಗ್ಯಾಕೆ 3
ಇಂತೆಂಬೊ ದ್ವೆತ್ಯರನ ನಿಂತ ಕ್ಷಣದಿ ಕೊಂದಿ ಕುಂತಿ ಮಕ್ಕಳ ಸಲುಹಿದಿಕುಂತಿ ಮಕ್ಕಳ ಸಲುಹಿದಿ ಲಕ್ಷ್ಮಿಕಾಂತನೀನಮ್ಮ ಕರುಣಿಸೊ 4
ಖೂಳ ದೈತ್ಯರ ಚರಿಯ ತಾಳಲಾರದೆಭೂದೇವಿ ಹೇಳಿದಳಾಗ ಹರಿಗ್ಹೋಗಿಹೇಳಿದಳಾಗ ಹರಿಗ್ಹೋಗಿ ರಮಿಯರಸುಕೇಳಿದ ಪರಮ ಹರುಷದಿ 5
****