Showing posts with label ಬಂದ ಕೃಷ್ಣ ಚಂದದಿಂದ ಬಂದ ನೋಡೇ vasudeva vittala BANDA KRISHNA CHANDADINDA BANDA NODE. Show all posts
Showing posts with label ಬಂದ ಕೃಷ್ಣ ಚಂದದಿಂದ ಬಂದ ನೋಡೇ vasudeva vittala BANDA KRISHNA CHANDADINDA BANDA NODE. Show all posts

Friday, 27 December 2019

ಬಂದ ಕೃಷ್ಣ ಚಂದದಿಂದ ಬಂದ ನೋಡೇ ankita vasudeva vittala BANDA KRISHNA CHANDADINDA BANDA NODE





On Krishna
ಶ್ರೀ ವ್ಯಾಸತತ್ತ್ವಜ್ಞತೀರ್ಥರ ಕೃತಿ 

 ಬಂದ ಕೃಷ್ಣ ಚಂದದಿಂದ । ಬಂದ ನೋಡೇ ಗೋಪ - 
 ವೃಂದದಿಂದಾನಂದಿಸುತ ಬಂದ ನೋಡೆ ॥ ಪ ॥ 

 ಗೋವಮೇವನೀವ ದೇವ ಬಂದ ನೋಡೆ । ಸ್ವಾಮಿ 
 ದೇವತಾವಾದ್ಯಗಳಿಂದ ಬಂದ ನೋಡೆ ॥ 1 ॥ 

 ಪಾಪಪೋಪ ಗೋಪರೂಪ ಬಂದ ನೋಡೆ । ಸ್ವಾಮಿ 
 ತಾಪಲೋಪಾಲಾಪಾಟೋಪ ಬಂದ ನೋಡೆ ॥ 2 ॥ 

 ಭೂಸುರಸುಖಸೂಸುತ ಬಂದ ನೋಡೆ । ಸ್ವಾಮಿ 
 ವಾಸುದೇವವಿಠಲ ತಾ ಬಂದ ನೋಡೆ ॥ 3 ॥
***

bandakriShNa Chandadinda banda nODe I
gOpavRundadinda nandisuta banda nODe ll

GOvamEvaneeva banda nODe I
dEvatAvAdyagaLinda banda nODe ll

pApapOpagOparUpa banda nODe I
tApalOpalEpalOpa banda nODe ll

BhUsurasuKasUsuta banda nODe I
vAsudEva viTtalatA banda nODe ll
***

pallavi

banda krSNa chandadinda banda nODE gOa vrndadindAnandisuta banda nODE

caraNam 1

gOva mEva niva dEva banda nODE dEvatA vAdyagaLinda banda nODE

caraNam 2

pApa pOpa gOpa rUpa banda nODE tApalOpa lEpalOpa banda nODE

caraNam 3

bhUsura sakha susutA banda nODE vASudEva viThala tA banda nODE
***

ಬಂದ ಕೃಷ್ಣ ಛಂದದಿಂದ ।
ಬಂದ ನೋಡೆ ಗೋಪ ।
ವೃಂದದಿಂದ ನಂದಿಸುತ ।
ಬಂದ ನೋಡೆ ।। ಪಲ್ಲವಿ ।।

ಗೋವ ಮೇವ ನೀವ ।
ದೇವ ಬಂದ ನೋಡೆ ।
ದೇವತಾ ವಾದ್ಯಗಳಿಂದ 
ಬಂದ ನೋಡೆ ।। ಚರಣ ।।

ಪಾಪ ಪೋಪ ಗೋಪ ।
ರೂಪ ಬಂದ ನೋಡೆ ।
ತಾಪಾ ಲೋಪಾ ಲಾಪಾ ।
ಟೋಪ ಬಂದ ನೋಡೆ ।। ಚರಣ ।।

ಭಾಸುರ ಸುಖ ।
ಸೂಸುತ ಬಂದ ನೋಡೆ ।
ವಾಸುದೇವವಿಠಲ ತಾ 
ಬಂದ ನೋಡೆ ।। ಚರಣ ।।
*****