Showing posts with label ತಿಳಿಯ ಬಲ್ಲೆನೆ ನಾನಿನ್ನ ವೆಂಕಟರಮಣ gurujagannatha vittala. Show all posts
Showing posts with label ತಿಳಿಯ ಬಲ್ಲೆನೆ ನಾನಿನ್ನ ವೆಂಕಟರಮಣ gurujagannatha vittala. Show all posts

Wednesday, 1 September 2021

ತಿಳಿಯ ಬಲ್ಲೆನೆ ನಾನಿನ್ನ ವೆಂಕಟರಮಣ ankita gurujagannatha vittala

 ..

ತಿಳಿಯ ಬಲ್ಲೆನೆ ನಾನಿನ್ನ ವೆಂಕಟರಮಣ ಪ 


ತಿಳಿಯ ಬಲ್ಲೆನೆ ನಿನ್ನ ನಳಿನಭವಾದ್ಯರಿ ಗಳವಡಿಯದ ಪಾದ ನಳಿನಮಹಿಮೆಗಳ ಅ.ಪ 


ಭಜಿಪಜನಕೆ ಭಾಗ್ಯ ನಿಜವಾಗಿ ನೀಡುವಿ ಅಜನ ಪಿತನೆ ನಿನ್ನ ನಿಜರಾಣಿ ಮಹಾಲಕ್ಷ್ಮೀ ದ್ವಿಜರಾಜ ವರೂಥ ಭುಜಗೇಂದ್ರ ನಿನ ಶಯ್ಯ ಭುಜಗಭೂಷಣ ಪೌತ್ರ ಅಜನಾಂಡ ನಿಜಸದನ ಗಜಮೊಗ ಸುರರೆಲ್ಲ ನಿಜಪರಿವಾರವು ವಿಜಯಸಾರಥಿ ನೀನೆ ಭಜಕರ ಸುರಧೇನು ವಿಜಯದಾಯಕ ನೀನೆಂದು ನಿನ್ನಯ ಪಾದ ಭಜನೆ ಬೇಡಿದೆ ಕೃಪಾಸಿಂಧು ನಂಬಿದೆ ನಿನ್ನ ಸುಜನವಾರಿಧಿ ಶರದೇಂದು ಪಾಲಿಸು ಎನ್ನ ನಿಜವಾಗಿ ಪೇಳುವೆ ವೃಜಿ£ಮರ್ದನನೆಂದು 1 


ಎಡಬಲದಲಿ ನಿನ್ನ ಮಡದೇರ ಒಡಗೂಡಿ ಒಡಲನಾಮಕವಾಗಿ ಒಡಲೊಳಿದ್ದನ್ನವ ವಡಬಾಗ್ನಿಯೊಳುನಿಂತು ಜಡÀಜಸಂಭವಸುರ ಗಡಣ ಕೆ ನೀಡುತ್ತಾ ಒಡೆಯನೆನಿಸಿ ಭವ ಕಡಲ ದಾಟಿಸಿ ಚರರ ದಡಸೇರಿಸುವನೆಂದು ಸಡಗರದಿಂದಲಿ ಅಡಿಯುಗ ಸೇವಿಪೆ ಮೃಡsÀನುತ ಪದಕÀಮಲಾಯುಗನೆ ಈ ಪೊಡವಿಯೊಳಗೆ ಮಹಲೀಲಾ ಮಾಡುತ ನಿತ್ಯ ಒಡೆಯ ಪುಷ್ಕÀರಣಿಕೂಲನಿಲಯ ಜಗ ದ್ವಡೆಯ ಎನ್ನನು ಪೊರೆ ತಡವ್ಯಾಕೊ ಸಿರಿಲೋಲ2 


ಸಿದ್ಧರಾಮಶೆಟ್ಟಿ ಶುದ್ಧಸ್ವರೂಪನೆ ಮುದ್ದುಮೋಹನ ಮುಖಕೆ ತಿದ್ದಿತೀಡಿದನಾಮ ಶುದ್ಧ ಭಕ್ತರನ್ನೆಲ್ಲ ಮುದ್ದುಗೊಳಿಸುವಂಥ ಮುದ್ದಾದ ಮುಖದಲ್ಲಿ ಎದ್ದು ಕಾಣುವ ನಗೆ ಪೊದ್ದುಕೊಂಡಿಹ ನಾನಾ ಆಭರಣದಿಂದಲಿ ಎದ್ದು ಬರುವ ನಿನ್ನ ಪ್ರದ್ಯೊತನಿಭ ಮೂರ್ತಿ ತಿದ್ದಿ ಎನ್ನಯಮನದಿ ನೀನೀಗವಾಸುದೇವ ಸದ್ಯೋ ಕೆಡಿಸೊ ದುರಿತರಾಶಿಯನ್ನು ಶುಧ್ಧಮಾಡೋ ನೀನೀಗ ವಾಸುದೇವ ಮದ್ಹøದಯಗತಬಿಂಬ ಸಿದ್ಧಗುರುಜಗನ್ನಾಥ ವಿಠಲರೇಯ 3

***