Showing posts with label ಗುಟ್ಟ ಪೇಳಿದಳೊಂದು ಗುಣು ಗುಣು ಗುಣು govinda. Show all posts
Showing posts with label ಗುಟ್ಟ ಪೇಳಿದಳೊಂದು ಗುಣು ಗುಣು ಗುಣು govinda. Show all posts

Monday, 11 November 2019

ಗುಟ್ಟ ಪೇಳಿದಳೊಂದು ಗುಣು ಗುಣು ಗುಣು ankita govinda

by ಗೋವಿಂದದಾಸ
ಗುಟ್ಟ ಪೇಳಿದಳೊಂದು ಗುಣು ಗುಣು ಗುಣು ಎಂದು |ಗಟ್ಟಿ ಪೇಳಿದರತ್ತೆ ಬೈಯ್ಯುವಳೆಂದು ಪ

ಪಚ್ಚೆ ಮಂಚದಿ ಬಂದು ಮಲಗಿಕೊಳ್ಳೆಂದು |ನಟ್ಟಿರುಳಲಿ ಬಹೆ ಕೃಷ್ಣ ಕೇಳೆಂದು ಅ.ಪಹದಿನಾರು ಸಾವಿರ ಸುದತಿಯರನು ಸೇರಿ |ಮದನಕೇಳಿದೊಳೆನ್ನ ಮರೆತೆಯಶೌರಿ|ಮದುವೆಯಾದವನೂರೊಳಿಲ್ಲ ಬಿಕಾರಿ |ಮದನತಾಪದಿ ಬೆಂದು ಬಳಲಿ ಬಾಯಾರಿ 1

ಗುರುಕುಚವನುನೋಡುಹರುಷ ಮಾತಾಡು |ಮರುಗ ಮಲ್ಲಿಗೆ ಜಾಜಿ ಸರವ ತಂದೀಡೊ |ಕರುಪುರ ವೀಳ್ಯವ ಸವಿದು ನೀನೋಡು|ಪರಿಪರಿಯಲಿ ನಿನ್ನ ಕೃಪೆಯನೀಡಾಡು 2

ಚಂದ್ರಗಾವಿಯ ಸೀರೆ ನೆರಿ ಹಿಡಿದುಟ್ಟು |ಚಂದದಿ ಕುಪ್ಪಸ ತೊಟ್ಟು ಜಡೆಬಿಟ್ಟು |ಚಂದನಕುಂಕುಮ ಕಸ್ತೂರಿ ಬೊಟ್ಟು |ಮಂದರಧರ ಗೊೀವಿಂದಗೆ ಚುಂಬನ ಕೊಟ್ಟು 3
*******