Showing posts with label ಆಲಿಸಿ ಕೇಳುವುದು guruvijaya vittala ankita suladi ವಿರಾಟ ರೂಪ ಸುಳಾದಿ AALISI KELUVADU VIRAATA RUPA SULADI. Show all posts
Showing posts with label ಆಲಿಸಿ ಕೇಳುವುದು guruvijaya vittala ankita suladi ವಿರಾಟ ರೂಪ ಸುಳಾದಿ AALISI KELUVADU VIRAATA RUPA SULADI. Show all posts

Sunday 8 December 2019

ಆಲಿಸಿ ಕೇಳುವುದು guruvijaya vittala ankita suladi ವಿರಾಟ ರೂಪ ಸುಳಾದಿ AALISI KELUVADU VIRAATA RUPA SULADI


Audio by Mrs. Nandini Sripad

virata roopa sulaadi ವಿರಾಟ ರೂಪ ಸುಳಾದಿ
ಶ್ರೀ ಮೊದಲಕಲ್ಲು ಶೇಷದಾಸರ ರಚನೆ 
(ಗುರುವಿಜಯವಿಠ್ಠಲ ಅಂಕಿತ)

ಆದಿತ್ಯವಾರದ ಸುಳಾದಿ 

 ರಾಗ ಭೌಳಿ 

 ಧ್ರುವತಾಳ 

ಆಲಿಸಿ ಕೇಳುವದು ಆದರದಿಂದಲಿ
ಶ್ರೀ ಲಕುಮೀಶನ ಭಕುತರೆಲ್ಲಾ
ಕಾಲ ದೇಶ ವ್ಯಾಪ್ತಳೆನಿಪಳಿಗಾದರು
ಶೀಲ ಮೂರುತಿಯಿಂದ ಸುಖವೆಂಬೊದೊ
ಕೇಳಿ ಬಲ್ಲದ್ದೆ ಸರಿ ಶ್ರುತಿ ಸ್ಮೃತಿ ಮುಖದಿಂದ
ಆಲೋಚನೆ ಇದಕ್ಕಿಲ್ಲ ಎಣಿಸಿ ಗುಣಿಸೆ
ಮೂಲ ಜೀವರ ಸುಖಕೆ ಶ್ರೀಪತಿ ಆದ ಬಳಿಕ 
ಹಲವು ಬಗೆಯಲಿ ಹರಿಯ ಸಂಪಾದಿಸು 
ಇಳಿಯೊಳು ವಾಜಿಪೇಯ ಪೌಂಡರಿಕಾದಿ ಯಜ್ಞ
ನಿರ್ಮಲವಾದ ಧ್ಯಾನ ಜಪ ನೇಮವೊ
ಜಾಲ ನಕ್ಷತ್ರ ಸಂಖ್ಯ ಮೀರಿದ ಮಹಾದಾನಾ
ಕಾಲೋಚಿತವಾದ ಕರ್ಮ ಧ್ಯಾನ ಮೌನ 
ಜ್ವಾಲವಾದ ಕ್ರೂರ ತಪ ಹೋಮ ಸುರರರ್ಚನ
ಸ್ಥೂಲ ಕರ್ಮಾಭಿಜಾತ ಪುಣ್ಯದಿಂದ 
ತ್ರಿಲೋಕಾಧಿಪತಿ ಸ್ಥಾನವೈದಿದ ನಂತರ
ಇಳಿಯಬೇಕೋ ಧರೆಗೆ ಭೂಯೊ ಭೂಯೊ
ಒಲಿಯನು ಇದಕ್ಕೆ ಜಲಜಾಯತೇಕ್ಷಣ 
ಒಲಿಸಬೇಕೆಂಬೋದು ಮನದಲ್ಲಿತ್ತೆ
ಪೇಳಿದ ಮಾತಿನಲ್ಲಿ ಸಂದೇಹ ಮಾಡದಲೆ
ಸುಲಭವಾದ ಪಥ ಪಿಡಿಯೊ ಬೇಗ
ನೀಲಾಂಬುದ ಶ್ಯಾಮ ಗುರುವಿಜಯವಿಠ್ಠಲರೇಯ 
ಪಾಲಿಸುವನು ಇದಕೆ ಶ್ರುತಿಯೇ ಸಾಕ್ಷಿ ॥ 1 ॥

 ಮಟ್ಟತಾಳ 

ಪ್ರವರ್ತಿ ನಿವೃತ್ತಿ ಅಭಿಧಾನದಿ ಕರ್ಮ
ದ್ವಿವಿಧವಾಗಿ ಉಂಟು ತಿಳಿವದು ಚೆನ್ನಾಗಿ
ಪ್ರವರ್ತಿ ಕರ್ಮವನು ಸ್ವಪ್ನದಿ ಕಾಮಿಸದೆ 
ನಿವೃತ್ತಿ ಕರ್ಮದಲಿ ರತಿವುಳ್ಳವನಾಗಿ
ದೇವ ಎನ್ನೊಳಗಿದ್ದು ಕಾಲ ಕರ್ಮಾನುಸಾರ
ಆವಾವದು ಮಾಳ್ಪ ಮಾಡುವೆನದರಂತೆ
ಆವ ಮಾಡಿಸದಿರಲು ನಾನ್ಯಾತಕೆ ಸಲ್ಲೆ 
ಕಾವ ಕೊಲ್ಲುವ ತಾನೆ ಅನ್ಯರು ಎನಗಿಲ್ಲ
ಸರ್ವಾಧಿಷ್ಠಾನದಲಿ ಹರಿಯೇ ವ್ಯಾಪಿಸಿ ಇದ್ದು
ಶರ್ವಾದಿಗಳಿಂದ ವ್ಯಾಪಾರವ ಗೈಸಿ 
ನಿರ್ವಾಹಕನಾಹ ಸ್ವತಂತ್ರ ತಾನಾಗಿ 
ಓರ್ವನಾದರು ಶ್ವಾಸ ಬಿಡುವ ಸೇದಿಕೊಂಬ
ಗರ್ವಿಗಳಿಲ್ಲವೊ ಈ ಫೃಥ್ವಿ ಮಧ್ಯ
ಈ ವಿಧದಲಿ ತಿಳಿದು ಜೀವರ ಲಕ್ಷಣ
ಸಾವಧಾನದಿ ಗುಣಿಸು ಹರಿ ಕರ್ತೃತ್ವವನು
ದೇವದೇವ ಬಿಂಬ ಜೀವನೆ ಪ್ರತಿಬಿಂಬ
ಭಾವ ಕೆಡದಂತೆ ಯೋಚಿಸು ಸರ್ವತ್ರ
ಜೀವಭಿನ್ನ ಗುರುವಿಜಯವಿಠ್ಠಲರೇಯ 
ಸೇವಕರಭಿಮಾನ ಎಂದೆಂದಿಗೆ ಬಿಡನು ॥ 2 ॥

 ತ್ರಿವಿಡಿತಾಳ 

ತನುವಿನೊಳಗೆ ಹೊರಗೆ ವಿಭಕ್ತ ಅವಿಭಕ್ತ
ಅಣುಮಹದ್ರೂಪದಿ ಹರಿ ವಾಸವಕ್ಕು
ವನಜಜಾಂಡಾಧಾರವಾಗಿಪ್ಪ ರೂಪವನ್ನು
ಮನುಜರ ದೇಹಾಶ್ರಯವಾಗಿಪ್ಪದೊ
ನೀನೊಲಿದು ಕೇಳುವದು ಇದನೇವೆ ಅವಿಭಕ್ತ
ಘನರೂಪವೆಂಬೋರು ಜ್ಞಾನಿಗಳು
ಮುನಿಗಳ ಮತವಿದು ಸಂದೇಹ ಬಡಸಲ್ಲ
ಮನದಿ ಚಿಂತಿಸು ಈ ಶೂನ್ಯಾಭಿದನ ವ -
ದನದ ಮೇಲೆ ವದನ ಶ್ರೋತ್ರದ ಮೇಲೆ ಶ್ರೋತ್ರ ನ -
ಯನದ ಮೇಲೆ ನಯನ ಈ ಕ್ರಮದಿಂದಲಿ
ತನು ಸಮಸ್ತದಲ್ಲಿ ಹರಿ ತನ್ನ ಅಂಗದಿಂದ 
ಅನುಸಾರವಾಗಿ ಆಶ್ರಯವಾಗಿಪ್ಪ 
ಕ್ಷೋಣಿವೊಳಗೆ ಈ ರೂಪ ಅನಪೇಕ್ಷದಿಂದ 
ತನುವು ನಿಲ್ಲದಯ್ಯಾ ವಿಧಿಗಾದರೂ
ಇನಿತು ಸೊಬಗು ಪರಿಜ್ಞಾನ ರಹಿತರಾಗಿ 
ವನಜ ಭವಾಂಡ ದಾನವಿತ್ತರೂನು
ವನಜನಾಭನೊಮ್ಮೆ ದೃಷ್ಟಿಲಿ ನೋಡನಯ್ಯಾ
ಅನುಮಾನ ಇದಕ್ಕಿಲ್ಲ ಶ್ರುತ್ಯುಕ್ತವೊ
ವಿನಯದಿಂದಲಿ ಇದು ಸ್ಮರಿಸಿದ ಜನರಿಗೆ 
ಜನುಮ ಜನುಮದ ಪಾಪ ಪ್ರಶಾಂತವೊ
ಬಿನಗು ಮೈಲಿಗೆಯುಂಟೆ ಸ್ಪ್ರಷ್ಟಾಸ್ಪ್ರಷ್ಟದಿಂದ
ಅನುದಿನ ಪವಿತ್ರನು ಅಕೃತದಿಂದ 
ಋಣತ್ರಯದಿಂದಲಿ ಮುಕ್ತನಾಗಿ ಸತತ
ದನುಜಾರಿ ಪುರವನ್ನೇ ಐದುವರೋ ಮಲಿನ
ಮನುಜರ ಮನಸಿಗೆ ತೋರನೊಮ್ಮೆ
ನೀನೇ ಗತಿ ಎಂದು ನಂಬಿದವರ
ಮನಕೆ ಪೊಳೆವನು ಬಿಡದೆ ಮಾತರಿಶ್ವನ ದಯದಿ
ಮನುಜಾ ತಿಳಿ ಇದನೆ ಭಕುತಿಯಿಂದ 
ಗುಣಗಣ ಪೂರ್ಣ ಗುರುವಿಜಯವಿಠ್ಠಲರೇಯ 
ಜನನ ಮರಣಗಳಿಂದ ದೂರ ಮಾಳ್ಪ ॥ 3 ॥

 ಅಟ್ಟತಾಳ 

ಈ ರೀತಿಯಿಂದಲಿ ದೇಹಧಾರಿಯ ರೂಪವ
ಸಾರಿ ಸಾರಿಗೆ ತಿಳಿದು ಪೂಜಿಸು ಗುಪ್ತದಿ
ಶಾರೀರ ಉಪಯೋಗವಾದ ವಿಷಯ ಜಾಲ
ಹರಿಗೆ ಷೋಡಶ ಉಪಚಾರವೆಂದೆನ್ನು
ಆರಾರು ಮಾಡುವ ವಂದನಾ ನಿಂದೆಯು 
ಶ್ರೀರಮಣನಿಗಿದು ಬಲು ಸ್ತೋತ್ರವೆಂದೆನ್ನು
ದಾರಾ ಪುತ್ರಾದಿ ಸಮಸ್ತ ಬಂಧುವರ್ಗ
ಪರಿಚಾರಕರೆನ್ನು ಘನ ಮಹಾಮಹಿಮಂಗೆ
ಮೆರೆವದೆಲ್ಲವು ಹರಿ ಮೆರೆವುದೆಂದೆನ್ನು
ನಿರುತದಲಿ ಇದು ಮರೆಯದೆ ಮನದೊಳು 
ಕರಚರಣಾದಿ ಯಾವದ್ದವಯವ ಚೇಷ್ಟೆಯ
ಗುರುಮುಖದಲಿ ತಿಳಿದು ಯಜ್ಞಕ್ರಮದಿಂದ
ನೀರಜನಾಭನಿಗರ್ಪಿಸು ಅವದಾನ ಪೂರ್ವಕ
ಮಾರಜನಕ ಗುರುವಿಜಯವಿಠ್ಠಲರೇಯ 
ಕರವ ಪಿಡಿವನು ಇದನೇವೆ ಕೈಕೊಂಡು ॥ 4 ॥

 ಆದಿತಾಳ 

ಬೊಮ್ಮಾಂಡದೊಳಗಿದ್ದ ಸ್ಥೂಲವಾದ ವಸ್ತುಗಳು
ನಿಮ್ನವಾಗಿ ದೇಹದಲ್ಲಿ ಸೂಕ್ಷ್ಮವಾಗಿ ಉಂಟು ಕೇಳು
ಈ ಮಹಾ ಲಕ್ಷಣದಿಂದಲೇ ಕ್ಷೇತ್ರವೆಂದು
ಸನ್ಮಾನ್ಯವಾಗಿಪ್ಪದೊ ಜಡಗಳ ಮಧ್ಯದಲ್ಲಿ
ಆ ಮಹಾ ಮಹಿಮನಾದ ಕ್ಷೇತ್ರಜ್ಞನನ್ನು ಭಜಿಸಿ
ಜನ್ಮವ ನೀಗುವದು ಅವ್ಯವಧಾನದಿಂದ ವೈ -
ಷಮ್ಯರಹಿತ ಗುರುವಿಜಯವಿಠ್ಠಲರೇಯ 
ಸಮ್ಮುಖನಾಗುವನು ಈ ಪರಿ ತಿಳಿದರೆ ॥ 5 ॥

 ಜತೆ 

ಸಕಲ ಸಾಧನ ಮಧ್ಯ ಉತ್ಕೃಷ್ಟವೆನಿಪದು 
ನಖಶಿಖ ಪರಿಪೂರ್ಣ ಗುರುವಿಜಯವಿಠ್ಠಲ ವೊಲಿವ ॥
*************


ಧೃವತಾಳ

ಆಲಿಸಿ ಕೇಳುವುದು ಆದರದಿಂದಲಿ |
ಶ್ರೀ ಲಕುಮೀಶನ ಭಕುತರೆಲ್ಲ |
ಕಾಲ ದೇಶ ವ್ಯಾಪ್ತಳೆನಿಪಳಿಗಾದರು |
ಶೀಲ ಮೂರುತಿ ಇಂದ ಸುಖವೆಂಬೋದೋ |
ಕೇಳಿಬಲ್ಲದ್ದೆಸರಿ ಶ್ರುತಿ ಸ್ಮೃತಿ ಮುಖದಿಂದ |
ಆಲೋಚನೆ ಇದಕ್ಕಿಲ್ಲ ಎಣಿಸಿಗುಣಿಸು |
ಮೂಲಜೀವರ ಸುಖಕೆ ಶ್ರೀಪತಿ ಆದ ಬಳಿಕ |
ಹಲವು ಬಗೆಯಲಿ ಹರಿಯ ಸಂಪಾದಿಸಿಸು |
ಇಳಿಯೋಳು ವಾಜಿಪೇಯ ಪೌಂಡರಿಕಾದಿ ಯಜ್ಞ |
ನಿರ್ಮಲವಾದ ಧ್ಯಾನ ಜಪ ನೇಮವೋ |
ಜಾಲ ನಕ್ಷತ್ರ ಸಂಖ್ಯ ಮೀರಿದ ಮಹಾದಾನಾ |
ಕಾಲೋಚಿತವಾದ ಕರ್ಮ ಧ್ಯಾನ ಮೌನ |
ಜ್ವಾಲವಾದ ಕ್ರೂರ ತಪ ಹೋಮ ಸುರರರ್ಚನ |
ಸ್ಥೂಲ ಕರ್ಮಾಭಿಜಾತ ಪುಣ್ಯದಿಂದ |
ತ್ರಿಲೋಕಾಧಿಪತಿ ಸ್ಥಾನ ವೈದಿದ ನಂತರ |
ಇಳಿಯಬೇಕೊ ಧರಿಗೆ ಭೂಯೊಭೂಯೊ |
ಒಲಿಯನು ಇದಕ್ಕ ಜಲಜಾಯತೇಕ್ಷಣ |
ಒಲಿಸಬೇಕೆಂಬೋದು ಮನದಲ್ಲಿತ್ತೆ |
ಪೇಳಿದ ಮಾತಿನಲ್ಲಿ ಸಂದೇಹ ಮಾಡದಲೆ |
ಸುಲಭವಾದ ಪಥಪಿಡಿಯೊ ಬೇಗ |
ನೀಲಾಂಬುದ ಶ್ಯಮ ಗುರು ವಿಜಯ ವಿಠ್ಠಲರೇಯ |
ಪಾಲಿಸುವನು ಇದಕೆ ಶ್ರುತಿಯೆ ಸಾಕ್ಷಿ || ೧ ||

ಮಟ್ಟತಾಳ

ಪ್ರವೃತ್ತಿ ನಿವೃತ್ತಿ ಅಭಿಧಾನದಿ ಕರ್ಮ |
ದ್ವಿವಿಧವಾಗಿ ವುಂಟು ತಿಳಿವದು ಚೆನ್ನಾಗಿ |
ಪ್ರವೃತ್ತಿ ಕರ್ಮವನು ಸ್ವಪ್ನದಿ ಕಾಮಿಸದೆ |
ನಿವೃತ್ತಿ ಕರ್ಮದಲಿ ರತಿ‌ಉಳ್ಳವನಾಗಿ |
ದೇವ ಎನ್ನೋಳಗಿದ್ದು ಕಾಲಕರ್ಮಾನುಸಾರ |
ಆವಾವದು ಮಾಳ್ಪ ಮಾಡುವೆನದರಂತೆ |
ಆವ ಮಾಡಿಸದಿರಲು ನಾನ್ಯಾತಕೆ ಸಲ್ಲೆ |
ಕಾವಕೊಲ್ಲುವ ತಾನೆ ಅನ್ಯರು ಎನಗಿಲ್ಲ |
ಸರ್ವಾಧಿಷ್ಟಾನದಲಿ ಹರಿಯೆ ವ್ಯಾಪಿಸಿ ಇದ್ದು |
ಶರ್ವಾದಿಗಳಿಂದ ವ್ಯಾಪಾರವ ಗೈಸಿ |
ನಿರ್ವಾಹಕನಾಹ ಸ್ವತಂತ್ರ ತಾನಾಗಿ |
ಓರ್ವನಾದರು ಶ್ವಾಸ ಬಿಡುವ ಸೇದಿಕೊಂಬ |
ಗರ್ವಿಗಳಿಲ್ಲವೊ ಈ ಪೃಥ್ವಿಮಧ್ಯ |
ಈ ವಿಧದಲಿ ತಿಳಿದು ಜೀವರ ಲಕ್ಷಣ |
ಸಾವಧಾನದಿ ಗುಣಿಸು ಹರಿ ಕತೃತ್ವವನು |
ದೇವದೇವ ಬಿಂಬ, ಜೀವನೆ ಪ್ರತಿಬಿಂಬ |
ಭಾವಕೆಡದಂತೆ ಯೋಚಿಸು ಸರ್ವತ್ರ |
ಜೀವಭಿನ್ನಗುರು ವಿಜಯವಿಠ್ಠಲರೇಯ |
ಸೇವಕರಭಿಮಾನ ಯೆಂದೆಂದಿಗೆ ಬಿಡನು || ೨ ||

ತ್ರಿವಿದಿತಾಳ

ತನುವಿನೊಳಗೆ ಹೊರಗೆ ವಿಭಕ್ತ ಅವಿಭಕ್ತ |
ಅಣುಮಹದ್ರೂಪದಿ ಹರಿ ವಾಸವಕ್ಕು |
ವನಜ ಜಾಂಡಾಧಾರವಾಗಿಪ್ಪ ರೂಪವನ್ನು |
ಮನುಜರ ದೇಹಾಶ್ರಯ ವಾಗಿಪ್ಪದೊ |
ನೀನೊಲಿದು ಕೇಳುವದು ಇದನೇವೆ ಅವಿಭಕ್ತ |
ಘನರೂಪವೆಂಬೋರು ಜ್ಞಾನಿಗಳು |
ಮುನಿಗಳಮತವಿದು ಸಂದೇಹ ಬಡಸಲ್ಲ |
ಮನದಿ ಚಿಂತಿಸು ಈ ಶೂನ್ಯಾಭಿದನ ವ |
ದನದ ಮೇಲೆ ವದನ ಶ್ರೋತ್ರದ ಮೇಲೆ ಶ್ರೋತ್ರ ನ |
ಯನದ ಮೇಲೆ ನಯನ ಈ ಕ್ರಮದಿಂದಲಿ |
ತನು ಸಮಸ್ತದಲ್ಲಿ ಹರಿ ತನ್ನ ಅಂಗದಿಂದ |
ಅನುಸಾರವಾಗಿ ಆಶ್ರಯ ವಾಗಿಪ್ಪ |
ಕ್ಷೋಣಿವೊಳಗೆ ಈರೂಪ ಅನುಪೇಕ್ಷದಿಂದ |
ತನುವುನಿಲ್ಲದಯ್ಯಾ ವಿಧಿಗಾದರೂ |
ಇನಿತು ಸೊಬಗ ಪರಿಜ್ಞಾನರಹಿತಗಾಗಿ |
ವನಜ ಭವಾಂಡ ದಾನವಿತ್ತರೂನು |
ವನಜನಾಭಾನೊಮ್ಮೆ ದೃಷ್ಟಿಲಿ ನೋಡನಯ್ಯಾ |
ಅನುಮಾನ ಇದಕ್ಕಿಲ್ಲ ಶೃತ್ಯುಕ್ತವೊ |
ವಿನಯದಿಂದಲಿ ಇದು ಸ್ಮರಿಸಿದ ಜನರಿಗೆ |
ಜನುಮ ಜನುಮದ ಪಾಪ ಪ್ರಶಾಂತವೊ |
ಬಿನಗು ಮೈಲಿಗೆ ಯುಂತೆ ಸ್ಪ್ರುಷ್ಟಾಸ್ಪ್ರುಷ್ಟದಿಂದ |
ಅನುದಿನ ಪವಿತ್ರನು ಆಕೃತದಿಂದ |
ಋಣತ್ರಯದಿಂದಲಿ ಮುಕ್ತನಾಗಿ ಸತತ |
ದನುಜಾರಿ ಪುರವನ್ನೆ ಐದುವರೋಮಲಿನ |
ಮನುಜರ ಮನಸಿಗೆ ತೋರನೊಮ್ಮೆ |
ನೀನೆಗತಿ‌ಎಂದು ನಂಬಿದವರ |
ಮನಕೆ ಪೊಳೆವನು ಬಿಡದೆ ಮಾತರಿಶ್ವನ ದಯದಿ |
ಮನುಜಾ ತಿಳಿ ಇದನೆ ಭಕುತಿ‌ಇಂದ |
ಗುಣಗಣ ಪೂರ್ಣ ಗುರು ವಿಜಯ ವಿಠ್ಠಲರೇಯ |
ಜನನ ಮರಣಗಳಿಂದ ದೂರಮಾಳ್ಪ || ೩ ||

ಅಟ್ಟ ತಾಳ

ಈ ರೀತಿ ಇಂದಲಿ ದೇಹ ಧಾರಿಯ ರೂಪವ |
ಸಾರಿಸಾರಿಗೆ ತಿಳಿದು ಪೂಜಿಸು ಗುಪ್ತದಿ |
ಶಾರೀರ ಉಪಯೋಗವಾದ ವಿಷಯ ಜಾಲ |
ಹರಿಗೆ ಷೋಡಶ ಉಪಚಾರ ವೆಂದೆನ್ನು |
ಆರಾರು ಮಾಡುವ ವಂದನಾ ನಿಂದ್ಯೆಯು |
ಶ್ರೀರಮಣನಿಗಿದು ಬಲು ಸ್ತೋತ್ರವೆಂದೆನ್ನು |
ದಾರಾಪುತ್ರಾದಿ ಸಮಸ್ತ ಬಂಧುವರ್ಗ |
ಪರಿಚಾರಕರೆನ್ನು ಘನ ಮಹಾಮಹಿಮಂಗೆ |
ಮೆರೆವದೆಲ್ಲವು ಹರಿ ಮೆರವುದೆಂದೆನ್ನು |
ನಿರುತದಲಿ ಇದು ಮರೆಯದೆ ಮನದೊಳು |
ಕರಚರಣಾದಿಯಾವದ್ದವಯವ ಚೇಷ್ಟೆಯಾ |
ಗುರುಮುಖದಲಿ ತಿಳಿದು ಯಜ್ಞಕ್ರಮದಿಂದ |
ನೀರಜನಾಭನಿಗರ್ಪಿಸು ಅವದಾನ ಪೂರ್ವಕ |
ಮಾರಜನಕ ಗುರು ವಿಜಯ ವಿಠ್ಠಲರೇಯ |
ಕರವ ಪಿಡಿವನು ಇದನೇವೆ ಕೈಕೊಂಡು || ೪ ||

ಆದಿತಾಳ

ಬೊಮ್ಮಾಂಡದೊಳಗಿದ್ದ ಸ್ಥೂಲವಾದ ವಸ್ತುಗಳು |
ನಿಮ್ನವಾಗಿ ದೇಹದಲ್ಲಿ ಸೂಷ್ಮವಾಗಿ ಉಂಟುಕೇಳು |
ಈಮ್ಮಹಾ ಲಕ್ಷಣದಿಂದಲೇ ಕ್ಷೇತ್ರವೆಂದು |
ಸನ್ಮಾನ್ಯವಾಗಿಪ್ಪದೊ ಜಡಗಳ ಮಧ್ಯದಲ್ಲಿ |
ಆ ಮಹಾ ಮಹಿಮನಾದ ಕ್ಷೇತ್ರಜ್ಞನನ್ನು ಭಜಿಸಿ |
ಜನ್ಮವ ನೀಗುವದು ಅವ್ಯವಧಾನದಿಂದ ವೈ |
ಷಮ್ಯರಹಿತ ಗುರು ವಿಜಯವಿಠ್ಠಲರೇಯ |
ಸಮ್ಮುಖನಾಗುವನು ಈಪರಿ ತಿಳಿದರೆ || ೫ ||

ಜತೆ

ಸಕಲ ಸಾಧನ ಮಧ್ಯ ಉತ್ಕ್ರುಷ್ಟವೆನಿಪದು |
ನಖಶಿಖ ಪರಿಪೂರ್ಣ ಗುರುವಿಜಯ ವಿಠ್ಠಲ ವೊಲಿವ || ೬ ||
***********