Showing posts with label ವ್ಯಾಪಾರ ಉದ್ಯೋಗವನು ಮಾಡುವೆ ಭೂಪಾಶದೊಳಗೆ vijaya vittala. Show all posts
Showing posts with label ವ್ಯಾಪಾರ ಉದ್ಯೋಗವನು ಮಾಡುವೆ ಭೂಪಾಶದೊಳಗೆ vijaya vittala. Show all posts

Thursday 17 October 2019

ವ್ಯಾಪಾರ ಉದ್ಯೋಗವನು ಮಾಡುವೆ ಭೂಪಾಶದೊಳಗೆ ankita vijaya vittala

ವಿಜಯದಾಸ
ವ್ಯಾಪಾರ ಉದ್ಯೋಗವನು ಮಾಡುವೆ |
ಭೂಪಾಶದೊಳಗೆ ಎಲ್ಲರಿಗೆ ಬಲ್ಲಿದನಾಗಿ ಪ

ಮುರಾರಿ ನಾಮವೆಂಬೊ ಮುಂಡಾಸವನೆ ಸುತ್ತಿ |
ಅರವಿಂದನಾಭವೆಂಬೊ ಅಂಗಿಯ ತೊಟ್ಟು ||
ನರಹರಿನಾಮವೆಂಬೊ ನಡುಕಟ್ಟನೆ ಸುತ್ತಿ |
ಕರುಣಾಸಾಗರನೆಂಬೊ ಕಠಾರಿಯನು ಸಿಕ್ಕಿಸಿ 1

ಕಮಲನಾಭವೆಂಬೊ ಕಮಲದಾನಿ ಪಿಡಿದು |
ತಿಮಿರದೋಷವೆಂಬೊ ಪಾಯಿಪೋಸು ಮೆಟ್ಟಿ ||
ಶಮೆದಮೆಯೆಂಬೊ ಪರಿಚಾರಕರ ಒಡಗೊಂಡು
ಗಮಿಸಿದ್ದೆನೊ ಹರಿದಾಸರಿದ್ದ ಚಾವಡಿಗೆ 2

ಪೋಗಿ ನಮಸ್ಕಾರವೆಂದು ತಲೆಬಾಗಿ ನಿಲ್ಲಲು |
ಭಾಗವತರು ಕರೆದು ಇಂಬನಿತ್ತು ||
ಯೋಗಕ್ಷೇಮವೆಲ್ಲ ವಿಚಾರಿಸಿ ಪ್ರೀತಿಯಲಿ |
ಈಗಳೆ ಕುಳಿತ ಅಚ್ಯುತನ ತೋರಿದರು 3

ಕಂಡು ಕರವನು ಮುಗಿಯೆ ಕರುಣಾಸಾಗರನೆಂಬೊ |
ಮಂಡಲಾಧಿಪನು ಕರೆದು ಮನ್ನಿಸಿ ||
ಗಂಡುಗಲಿಯಾಗೆಂದು ಸಂಚುಗಾರಿಕೆ ತುಲಸಿ |
ದಂಡೆ ಕೊರಳಿಗೆ ಹಾಕಿ ದಾಸರೊಳಗಿರಿಸಿದನು 4

ಘನವಾದ ಉದ್ಯೋಗ ದೊರಕಿತು ನನಗಿನ್ನು |
ಅನುಮಾನವಿಲ್ಲವು ಎಂದೆಂದಿಗೂ ||
ದಿನದಿನಕೆ ಹರಿನಾಮವೆಂಬೊ ಲೆಖ್ಖ-|
ವನು ಬರೆದು ತ್ರಿಲೋಕದರಸನಿಗೆ ಒಪ್ಪಿಸಿದೆ || 5

ಬರೆದು ಲೆಖ್ಖವ ನೋಡಿ ದಯಾಪಯೋವಾರಿಧಿ |
ಹರುಷದಿಂದಲಿ ಎನಗೆ ಸಂಬಳಕ್ಕೆ ||
ಬರೆಸಿ ಕೊಟ್ಟನು ಸನದು ಕೇಶವಾದಿಯಂಬೊ |
ವರಹಗಳು ಎಂದಿಗಾದರು ಅಳಿವಿಲ್ಲದೆ || 6

ಈಸು ದಿನ ಉದ್ಯೋಗ ಹೀನನಾಗಿ ನೊಂದೆ |
ದಾಸರಾ ದಯದಿಂದ ದೊರೆಕಿತಿಂದು ||
ಸಂಚಿತ ಕರ್ಮ ಓಡಿಸಿ |
ಶ್ರೀಶ ವಿಜಯವಿಠ್ಠಲನಲ್ಲಿ ಬಾಳಿದೆನೊ || 7
***

pallavi

vyApAra udyOgavanu mADu bhUpAradoLage ellarige ballidanAgi

caraNam 1

murAri nAmavembo muNDasvane sutti aravanindandavembo angyatoTTu
narahari nAmavewmbo naDukaTTane sutti karuNAsAgaranembo kaThAriyanu sikkisi

caraNam 2

kamalanAbhanembo kalamadAni piDidu timiradOSavembo pAyipOsumeTTi
shamedameyembo pAricArakara oDagoNDu gamanisideno haridAsaridda cAvaDige

caraNam 3

pOgi namaskAravendu talebAgi nillalu bhAgavataru karedu imbanittu
yOga kSEmavella vicArisi prItiyeli igaLa kuLita acyutana tOridaru

caraNam 4

kaNDu karavanu mUgiye karuNAsAgaranembo maNDalAdhipanu karedu mannisi
gaNDugaliyAgendu sancugArike tulasi daNDEkoralike hAki dAsaroLagirisidanu

caraNam 5

ghanavAda udyOga dorakitu nanaginnu anumAnavillavu endendigu
dina dinake harinmavembo lekkhavanu baredu trilOka darasage oppiside

caraNam 6

bared lekkhava nODi dayapayOvAridhi haruSadindali enage sambaLakke
baresikoTTanu sanadu kEshavAdiyembo varahagaLu endigAdaru aLivillada

caraNam 7

Isudina udyOga hInanAginonde dAsarA dayadinda dorakitindu
Esu janmada sancita karma Odisi shrIsha vijayaviThalanalli bALidenO
***