Showing posts with label ತೆರೆ ಬಾಗಿಲವ ಸುಗುಣೆ ಸುಂದರಿ ಮುಗಿವೆ ಕರವನುನಗಧರನ indiresha. Show all posts
Showing posts with label ತೆರೆ ಬಾಗಿಲವ ಸುಗುಣೆ ಸುಂದರಿ ಮುಗಿವೆ ಕರವನುನಗಧರನ indiresha. Show all posts

Monday, 2 August 2021

ತೆರೆ ಬಾಗಿಲವ ಸುಗುಣೆ ಸುಂದರಿ ಮುಗಿವೆ ಕರವನುನಗಧರನ ankita indiresha

ತೆರೆ ಬಾಗಿಲವ ಸುಗುಣೆ ಸುಂದರಿ ಮುಗಿವೆ ಕರವನುನಗಧರನ ಚರಣಕಮಲಯುಗಳ ನೋಳ್ಪೆನು ಪ

ಪೇಳಿದವರು ಯಾರು ನಿನಗೆ ಕೀಲಿ ಹಾಕಲುಶೀಲಲಾಮನೊಬ್ಬನಾಜ್ಞೆ ಕೇಳಿ ನಡೆವಳು 1

ಹರಿಯು ಎಷ್ಟು ಸಾರೆ ನಿನಗೆ ತೆರೆಯ ಕೀಲಿಯೆಕರೆದು ಪೇಳಿದಾನೆ ಮಾತು ಸಿರಿಯೇ ಮರೆತೆಯಾ 2

ಬಾರೋ ಎಂದು ನೀನೆ ಎಷ್ಟು ಸಾರಿ ಕರೆದೆಯಾನಾರಿಮಣಿಯೆ ಬಂದರ್ಹೀಗೆ ತೋರ್ಪೆ ರೀತಿಯಾ 3

ಇಂದು ಹರಿಯ ದ್ವಾರದಲ್ಲಿ ಬಂದು ನಿಂತಿಹೆಮಂದಗಮನೆ ಕೀಲಿನೀನು ಬಂಧ ಮಾಳ್ಪರೆ 4

ಇಷ್ಟು ನೋಡಿ ಇಂದಿರೇಶನ ಭೆಟ್ಟಿ ಭರದಲಿಕೃಷ್ಣೆ ಬಂದು ತೆರೆಯೆ ಕೀಲಿ ದೃಷ್ಟಿಯಾಗಲು 

****