ಕೃಷ್ಣದ್ವೈಪಾಯನ ಗುರುರಾಜರ ಚರಣ ಕಮಲಕಾನಮಿಪೆ
ಶಿರಬಾಗಿ ಬಿನ್ನೈಪೆ ಪ
ಧರೆಸುರ ಮಂಡಿತ ಸುರಪುರದಲಿ ಮದ್ಗುರು
ಯಳಿಮೇಲಾರ್ಯರಿಗೆ ವರದ ಶಿರಿ ಅ.ಪ
ವೇದವ್ಯಾಸರ ಕರಕಮಲಜರೆನಿಸಿ ವೇದೇಶರ ಮುಖದಿ
ವೇದಾಂತ ಸುಶಾಸ್ತ್ರ e್ಞÁನವ ಘಳಿಸಿ ಮೇದಿನಿಯೊಳು ಚರಿಸಿ
ವಾದಿವಾರಣ ಮೃಗಾಧಿಪರೆನಿಸುತ ಮೇದಿನಿ ಸುರರಿಗೆ
ಮೋದವ ಗರೆದ 1
ಧರಿಜಾರಮಣನ ಪದಪೂಜಿಸಿದಂಥ ಶ್ರೀ ವ್ಯಾಸರ ಮಂತ್ರ
ಧರಿಯೊಳು ಜಪಿಸಿದರಿವರೆ ಮಹಾಂತರೆನಿಸಿದರತಿ ಶಾಂತ
ವರುಣಿಸಲೊಶವೆ ಗುರುವರ ಮಠದಲಿ ಸುರಗಂಗೆಯು
ಬಂದಿರುವ ಮಹಿಮೆಯನು 2
ವರ ಭೀಮಾತಟದಿ ವಿರಾಜಿಸುವಂಥ ಕುಸುಮೂರುತಿ ಸಂಸ್ಥ
ಶರಣಾಗತ ಜನರಿಗೆ ಸಕಲಾಭೀಷ್ಟ ಗರಿಯುವ ಸುಸಮರ್ಥ
ಧರೆಯೊಳು ಮೆರೆಯುವ 'ಶಿರಿ ಕಾರ್ಪರ ನರಹರಿ' ಯ ನೊಲಿ-ಸಿರುವ ಪರಮ ಮಹಾತ್ಮ3
****