Showing posts with label ರಾಜರಾಜರ ನೋಡ ಅಮ್ಮಯ್ಯಕೋಟಿ ramesha. Show all posts
Showing posts with label ರಾಜರಾಜರ ನೋಡ ಅಮ್ಮಯ್ಯಕೋಟಿ ramesha. Show all posts

Saturday, 16 November 2019

ರಾಜರಾಜರ ನೋಡ ಅಮ್ಮಯ್ಯಕೋಟಿ ankita ramesha

by ಗಲಗಲಿಅವ್ವನವರು
ರಾಜ ರಾಜರ ನೋಡ ಅಮ್ಮಯ್ಯಕೋಟಿ ತೇಜರು ನಿಂತಿಹರಮ್ಮಯ್ಯ ಪ.

ಕುಂತಿ ಮಕ್ಕಳ ನೋಡ ಅಮ್ಮಯ್ಯಚಂದ್ರ ಕಾಂತಿಯಿಂದೊಪ್ಪುತ ಅಮ್ಮಯ್ಯನಿಂತ ಸೊಬಗು ನೋಡ ಅಮ್ಮಯ್ಯಲಕ್ಷ್ಮೀಕಾಂತನ ಇದುರಿಗೆ ಅಮ್ಮಯ್ಯ 1

ಪಾಂಡವರ ನೋಡ ಅಮ್ಮಯ್ಯಸೂರ್ಯ ಮಂಡಲದಂತಿಹರ ಅಮ್ಮಯ್ಯದುಂಡಾಗಿ ನಿಂತಿಹರಮ್ಮಯ್ಯಅವರಕೊಂಡಾಡಲ್ವಶವಲ್ಲ ಅಮ್ಮಯ್ಯ2

ಶಶಿಮುಖಿಯರ ನೋಡ ಅಮ್ಮಯ್ಯಕಾಂತೆ ದೇಶಲೆಲ್ಲ ಬೆಳಕು ನೋಡ ಅಮ್ಮಯ್ಯಹಸುಳೆಯರು ನಿಂತಿಹರಮ್ಮಯ್ಯನಮ್ಮ ಕುಸುಮನಾಭನ ಮುಂದೆ ಅಮ್ಮಯ್ಯ 3

ಕಡು ಚಲುವೆಯರ ನೋಡಮ್ಮಯ್ಯನಿಂತಉಡುರಾಜಮುಖಿಯರಮ್ಮಯ್ಯಕಡಲಶಯನನ ಮುಂದೆ ಅಮ್ಮಯ್ಯಅವರಬೆಡಗು ಎಷ್ಟು ಹೇಳಲಮ್ಮಯ್ಯ4

ಲಕ್ಷಣವಂತರಮ್ಮಯ್ಯನಿಂತು ನಕ್ಷತ್ರ ಮಾಲೆಯಂತೆ ಅಮ್ಮಯ್ಯವೀಕ್ಷಿಸಿ ರಾಮೇಶನ ಅಮ್ಮಯ್ಯಸುಖಅಕ್ಷಯಪಡೆದಿಹರಮ್ಮಯ್ಯ5
*******