Audio by Mrs. Nandini Sripad
ಸುಳಾದಿ
ಕ್ಷುದ್ರದೇವತೆಗಳ ಪೂಜೆ ಮಾಡುವುದು ಬಿಟ್ಟು ಸರ್ವೋತ್ತಮನಾದ ಶ್ರೀಹರಿನಾಮ ನೆನಿಯುವುದು
ರಾಗ ಸಾವೇರಿ
ಝಂಪಿತಾಳ
ಅಂಜುವದು ಸಲ್ಲ ಶ್ರೀಕಂಜನಾಭನ ಪಾದ
ಕಂಜವು ನಿನಗೊಜ್ರ ಪಂಜರವಾಗಿರಲು 
ಪುಂಜರ ಪಾಪಗಳು ನಿನ್ನಂಜಿಸ ಬಲ್ಲವೆ| 
ಕಂಜ ಬಾಂಧವನುದಿಸೆ ಮಂಜು ಎದರಿಸುವದೇ| 
ಯಂಜಲ ಮಾತನು ಕೇಳಿ ನಂಜಿ ನಂಜಾಡದಿರು | 
ಬಂಜೆ ಭಕುತಿಯ ಬಿಡು ಭುಂಜಿಸು ಪುಣ್ಯ ಸಮಿ- | 
ತಿಂಜಯ ನಾಮ ಶಿರಿ ವಿಜಯವಿಠ್ಠಲ ಗೆರಗು| 
ನಂಜ ಸುಧಾರಸವು ಅಂಜುಳಿವಿ ಮರುಳೆ ॥ 1 ॥
ಮಟ್ಟತಾಳ
ಒಮ್ಮನದಲ್ಲಿರೊ ಒಮ್ಮನದಲ್ಲಿರೊ
ರಮ್ಮೆಯರಸನು ಸುಮ್ಮನದಿಂದಲ್ಲಿ 
ನಮ್ಮನ್ನು ಪೊರೆವನು ಒಮ್ಮನದಲ್ಲಿರೊ| 
ರಮ್ಮೆಯರಸ ಪರಬೊಮ್ಮ ಬೊಮ್ಮನಯ್ಯಾ 
ತಿಮ್ಮ ವಿಜಯವಿಠ್ಠಲ ಮಹಾ ಮೂರುತಿ 
ಘಮ್ಮನದಿಂದಲಿ ಬಂದು ದುಮ್ಮನವ ಕಳೆವ ॥ 2 ॥
ಧ್ರುವತಾಳ
ವಾರಿಧಿಯ ಮಥಿಸಲು ಘೋರ ವಿಷ ವುದುಭವಿಸಿ
ಮಾರುತನುಂಡು ತೇಗಿದ ಕಾಣಿರೊ| 
ಮಾರರಿಪು ಧರಿಸಿ ರಘುವೀರನ್ನ ನಾಮದಿಂದ | 
ಜೀರಣಕ್ಕೆ ತಂದದ್ದು ಧಾರುಣಿ ಅರಿಯದೆ|
ನಾರಾಯಣನೆಂಬ ಸಾರ ನಾಮಾಮೃತವು| 
ಭಾರತೀಶನ ಕಾಯ್ದು ಆತನ ಸೇವಕನೆಂದು 
ಗೌರೀಶನ ಕಾಯಿತು ಗೌರದಿಂದ 
ಚಾರುವಾಕ ಮನವೆ ನಿನ್ನ ಕಾಯಿವದಿರದೆ 
ಶ್ರೀರತುನ ಗರ್ಭನು ವಿಜಯವಿಠ್ಠಲ ಬಂದು| 
ಬೇರರಸಿ ಶೀಳಿ ಸಂಸಾರವ ಪರಿವ ॥ 3 ॥
ರೂಪಕತಾಳ
ತುದಿ ನಾಲಿಗೆಯಿಂದ ಪದುಮನಾಭನ ನಾಮ|
ತುದಿಯನ್ನಿತ್ತು ಸೇವಿಸಲು ಮಧುರಾಮೃತವಾಗಿ | 
ಕ್ಷುಧೆ ಬಾಧೆ ಹಿಂಗೋದು ಮದಗರ್ವ ಅಡಗೋದು 
ಇದೆ ಸವಿದು ಪದೋಪದಿಗೆ | 
ವಿದುರಾದಿ ಭಕುತರು ಪದವಿಯ ಸೇರಿದರು| 
ಯದುಶ್ರೇಷ್ಠ ವಿಜಯವಿಠ್ಠಲನ ಒಂದೇ ನಾಮ| 
ಹೃದಯದಲ್ಲಿರಿಸೆ ಅಘದ ಉಧದಿ ಬತ್ತುವದೂ ॥ 4 ॥
ತ್ರಿವಿಡಿತಾಳ
ಮೀನನ ಮರಿಗೆ ಈಸು ಕಲಿಸುವರಾರು|
ಮೀನಾಂಕಗೆ ಕಾಮ ತುಂಬಿ ಇತ್ತವರಾರು| 
ಆನಿಗೆ ಸೊಂಡಿಲ ತೂಗು ಯೆಂದವರಾರು| 
ಜ್ಞಾನಿಗೆ ಹರಿನಾಮ ತೋರಿ ಕೊಟ್ಟವರಾರು| 
ನೀನರಿದು ತಿಳಿದುಕೋ ನಿನಗೆ ಗುರುವಾದರೂ| 
ತಾನತಿ ಸೂಕ್ಷ್ಮ ಪೇಳುವನಲ್ಲದೆ| 
ಹೀನ ಜೀವವೆ ನಿನ್ನ ಧ್ಯಾನಕ್ಕೆ ಮನಬಂದು| 
ಪ್ರಾಣದ ವಿಜಯವಿಠ್ಠಲನ್ನ ಸೂಕ್ಷ್ಮಚರಣವ| 
ಕಾಣು ಕುಬುದ್ಧಿಗಳ ಮಾಣು ಗತಿಗೇಣು ॥ 5 ॥
ಅಟ್ಟತಾಳ
ಕ್ಷುದ್ರದೇವತೆ ಪೂಜೆ ಚಿರಕಾಲ ಮಾಡಲು |
ಕದ್ದು ತಿಂದಂತೆಯಾಗುವುದು ಸಿದ್ಧ | 
ಛಿದ್ರ ಗೋಣಿಯಲ್ಲಿ ಉತ್ತಮ ಸರಕನ್ನು ತುಂಬೆ|
ಬಿದ್ದು ಪೋಗದಲೆ ಸೇರುವದೆ ತನ್ನ | 
ಉದ್ಧಟತನ ಬಿಡು ಉಚಿತ ಸಾಧನದಿಂದ | 
ಸಿದ್ಧ ಸಂಕಲ್ಪ ಶ್ರೀವಿಜಯವಿಠ್ಠಲನ್ನ | 
ಉದ್ದಿನಷ್ಟು ನೆನೆದು ಉದ್ಧಾರವಾಗೊ ॥ 6 ॥
ಆದಿತಾಳ
ಆವದಾದರು ಬಿಡು ಆವದಾದರು ಕೊಡು|
ಆವದಾದರು ಕೂಡು ಆವದಾದರು ಇಡು| 
ಆವದಾದರು ಫೋಗೆ ಹವರಗಾಯಿತು 
ಈ ವಸ್ತ ಮರದರಿನ್ನು ಆವಲ್ಲಿ ದೊರಿಯದು| 
ದೇವೇಶ ವಿಜಯವಿಠ್ಠಲ ನಿನ್ನ| 
ಯಾವ ಜೀವಕ್ಕೆ ಮುಡಿ ಇಟ್ಟು ಕಾವದು ಜೋಕೇಲಿ ॥ 7 ॥
ಜತೆ
ಭಯಕೃದ್ಭಯನಾಶನ ನೀತನಿಲ್ಲ|ದೆ ಯಲ್ಲಿ
ದೈವ ಮತ್ತೊಂದಿಲ್ಲ ವಿಜಯವಿಠ್ಠಲನ್ನ ॥
**********ಶ್ರೀವಿಜಯರಾಯರವಿರಚಿತಕ್ಷುದ್ರದೇವತೆಗಳುಪೂಜೆ ಮಾಡುವುದುಬಿಟ್ಟು ಸರ್ವೋತ್ತಮನಾದ ಶ್ರೀಹರಿ ನಾಮನೆನಿಯುವುದು
ರಾಗ- ಸಾವೇರಿ ಝಂಪಿತಾಳ
ಅಂಜುವುದು ಸಲ್ಲ ಶ್ರೀಕಂಜನಾಭನ ಪಾದ ಕಂಜವು ನಿನಗೊಜ್ರ ಪಂಜರವಾಗಿರಲು ಪುರಜನ ಪಾಪಗಳು ನಿನ್ನಂಜಿಸ ಬಲ್ಲವೆ| ಕಂಜ ಭಾಂಧವನನುಸರಿಸೆ ಮಂಜು ಎದರಿಸುವದೇ| ಯಂಜಲ ಮಾತನು( ಕೇಳೆ) ನಂಜಿ ನಂಜಾಡದಿರು | ಬಂಜೆ ಭಕುತಿಯ ಬಿಡು ಭುಂಜಿಸು ಪುಣ್ಯ ಸಮಿ| ತಿಂಜಯ ನಾಮ ಶಿರಿವಿಜಯ ವಿಠ್ಠಲಗೇರಗು| ನಂಜಸುಧಾರಸವು ಅಂಜುಳವಿ ಮರುಳೆ||೧||
ಮಟ್ಟತಾಳ
ಒಮ್ಮನದಲ್ಲಿರೊ ಒಮ್ಮನದಲ್ಲಿರೊ ರಂಮೆಯರಸನು ಸಮ್ಮನದಿಂದಲಿ ನಮ್ಮನ್ನು ಹೊರೆವನು ಒಮ್ಮನದಲ್ಲಿರೊ| ರಂಮೆಯರಸ ಪರಬೊಮ್ಮ ಬೊಮ್ಮನಯ್ಯಾ ತಿಮ್ಮ ವಿಜಯ ವಿಠ್ಠಲ ಮಹ ಮೂರುತಿ ಘಮ್ಮನದಿಂದಲಿ ಬಂದು ದುಮ್ಮನವ ಕಳೆವ ||೨||
ಧ್ರುವತಾಳ
ವಾರಾಧಿಯ ಮಥಿಸಲು ಘೋರ ವಿಷ ವುದುಭವಿಸಿ ಮಾರುತನುಂಡು ತೇಗಿದ ಕಾಣಿರೊ| ಮಾರರಿಪು ಧರಿಸಿ ರಘುವೀರನ್ನ ನಾಮದಿಂದ | ಜೀರಣಕ್ಕೆ ತಂದದ್ದು ಧಾರುಣಿ ಅರಿಯದೆ|ನಾರಾಯಣನೆಂಬ ಸಾರನಾಮಾಮೃತವು| ಭಾರತೀಶನ ಕಾಯ್ದು ಆತನ ಸೇವಕನೆಂದು ಗೌರೀಶನ ಕಾಯಿತು ಗೌರದಿಂದ ಚಾರುವಾಕ ಮನವೆ ನಿನ್ನ ಕಾಯಿವದಿರದೆ ಶ್ರೀರತುನ ಗರ್ಭನು ವಿಜಯ ವಿಠ್ಠಲ ಬಂದು| ಬೇರರಸಿ ಶೀಳಿ ಸಂಸಾರವ ಪರಿವ ||೩||
ರೂಪಕತಾಳ
ತುದಿ ನಾಲಿಗೆಯಿಂದ ಪದುಮನಾಭನ ನಾಮಾ| ತುದಿಯನ್ನಿತ್ತು ಸೇವಿಸಲು ಮಧುರಾಮೃತವಾಗಿ | ಕ್ಷುಧೆಭಾದೇ ಹಿಂಗೋದು ಮದಗರ್ವ ವಾದಗೋದು ಇದೆ ಸವಿದು ಪದೋಪದಿಗೆ | ವಿದುರಾದಿ ಭಕುತರು ಪದವಿಯ ಸೇರಿದರು| ಯದುಶ್ರೇಷ್ಠ ವಿಜಯ ವಿಠ್ಠಲನ ಒಂದೇನಾಮ| ಹೃದಯದಲ್ಲಿರಿಸೆಘದ| ಉಧದಿ ಬತ್ತುವುದೂ||೪||
ತ್ರಿವಿಡಿತಾಳ
ಮೀನನ ಮರಿಗೆ ಈಸು ಕಲಿಸುವರಾರು| ಮೀನಾಂಕಕೆ ಕಾಮ
ತುಂಬಿ ಇತ್ತವರಾರು|  ಆನಿಗೆ ಸೊಂಡಿಲ ತೂಗು ಯೆಂದವರಾರು| ಜ್ಞಾನಿಗೆ 
ಹರಿನಾಮ ತೋರಿ ಕೊಟ್ಟವರಾರು| ನೀನರಿದು ತಿಳಿದುಕೋ ನಿನಗೆ  
ಗುರುವಾದರೂ| ತಾನತಿಸೂಕ್ಷ್ಮ ಪೇಳುವನಲಲ್ಲದೆ| ಹೀನ ಜೀವವೆ ನಿನ್ನ ಧ್ಯಾನಕ್ಕೆ ಮನಬಂದು| ಪ್ರಾಣದ ವಿಜಯ ವಿಠ್ಠಲನ್ನ ಸೂಕ್ಷ್ಮಚರಣವ| ಕಾಣು  ಕುಬುದ್ಧಿಗಳಮಾಣು ಗತಿಗೇಣು||೫||
ಅಟ್ಟತಾಳ
ಕ್ಷುದ್ರದೇವತೆ ಪೂಜೆ ಚಿರಕಾಲ ಮಾಡಲು | ಕದ್ದು ತಿಂದಂತೆಯಾಗುವುದು ಸಿದ್ಧ | ಛಿದ್ರ ಗೋಣಿಯಲ್ಲಿ ಉತ್ತಮ ಸರಕನ್ನು ತುಂಬೆ|
ಬಿದ್ದು ಹೋಗದಲೆ ಸೇರುವುದೆ ತನ್ನ | ಉದ್ಧಟತನ ಬಿಡು ಉಚಿತ 
ಸಾಧನದಿಂದ | ಸಿದ್ಧ ಸಂಕಲ್ಪ ಶ್ರೀ ವಿಜಯ ವಿಠ್ಠಲನ್ನ| ಉದ್ದಿನಷ್ಟು ನೆನೆದು
ಉದ್ಧಾರವಾಗೊ||೬||
ಆದಿತಾಳ
ಆವದಾದರು ಬಿಡು ಆವದಾದರು ಕೊಡು| ಆವದಾದರು ಕೂಡು ಆವದಾದರು ಇಡು| ಆವದಾದರು ಫೋಗೆ ಹವರಗಾಯಿತು ಈ ವಸ್ತ ಮರದರಿನ್ನು ಆವಲ್ಲಿ ದೊರಿಯದು| ದೇವೇಶ ವಿಜಯ ವಿಠ್ಠಲ ನಿನ್ನ| ಯಾವ ಜೀವಕ್ಕೆ ಮುಡಿ ಇಟ್ಟು| ಕಾವದು ಜೋಕೇಲಿ||೭||
ಜತೆ
ಭಯಕೃದ್ಧಯನಾಶನ ನೀತನಿಲ್ಲ |
ದೆ ಯಲ್ಲಿ ದೈವ ಮತ್ತೊಂದಿಲ್ಲ ವಿಜಯ ವಿಠ್ಠಲನ್ನ||೮||
ರಾಜಾರಾಂ, ಗುಂತಕಲ್ಲು.
*************
 
