Showing posts with label ಜಯ ಜಯ ಮಂಗಳವೆನ್ನಿರೇ ಶ್ರಯಕರ ದತ್ತಾತ್ರೇಯ ಮೂರ್ತಿಗೆ gurumahipati. Show all posts
Showing posts with label ಜಯ ಜಯ ಮಂಗಳವೆನ್ನಿರೇ ಶ್ರಯಕರ ದತ್ತಾತ್ರೇಯ ಮೂರ್ತಿಗೆ gurumahipati. Show all posts

Wednesday 1 September 2021

ಜಯ ಜಯ ಮಂಗಳವೆನ್ನಿರೇ ಶ್ರಯಕರ ದತ್ತಾತ್ರೇಯ ಮೂರ್ತಿಗೆ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಜಯ ಜಯ ಮಂಗಳವೆನ್ನಿರೇ ಶ್ರಯಕರ ದತ್ತಾತ್ರೇಯ ಮೂರ್ತಿಗೆ ಪ 


ನೋಡಿ ಭಾರವ ಕೊಂಡು ನಿಂದುವದಗಿ ಬಂದು ಬೇಡಿದ ಕೊಡಲಿಕ್ಕೆ ಬಲುಧೀರನು ಮಾಡಿ ವಿಷಂ ಮೃತಮತಿಗೋಚರವಾಚಿ ರೂಢಿಸಿ ಹೊರೆವ ಸುಧಯ ನಿಧಿಗೆ 1 

ಶಳವಿಗೆ ಹಾರಿಸದೆ ಶರಣಾವಗ ವಿಡಿ ದಿಳೆಯ ಸುಖವನಿತ್ತುದುರಿತ್ಹರಿಸಿ ತಿಳಿಯಲಣುಗತಪ್ಪ ತಾಯಿ ನೋಡದ ಸ್ಥಿರ ಒಲುಮಿ ಮೋಹನ ಬುದ್ಧಿಮಲಹಾರಿಗೆ 2 

ಪೊಳೆವೆದೆಯೊಳು ನೆನಪಿಗೆ ಮೈಯ್ಯಾಲಿದು ಹರಿಸಿಲುವಾ ಮನೋರಾಮನುತ ಭಕ್ತಿಗೆ ಫಲ ಶಾಖನರೆನುಂಡು ಶಿಶುವಾಗಿರುವನಮ್ಮ ಸಲಹುವ ಮಹಿಪತಿ ಸುತ ಪ್ರಿಯಗೆ 3

****