Showing posts with label ಕೊಳಲನೂದುವ ಸುಂದರನ್ಯಾರೆ ತಂಗಿ ಸುಂದರನಿವನೆ ankita indiresha KOLALANOODUVA SUNDARANYAARE TANGI SUNDARANIVANE. Show all posts
Showing posts with label ಕೊಳಲನೂದುವ ಸುಂದರನ್ಯಾರೆ ತಂಗಿ ಸುಂದರನಿವನೆ ankita indiresha KOLALANOODUVA SUNDARANYAARE TANGI SUNDARANIVANE. Show all posts

Thursday, 2 December 2021

ಕೊಳಲನೂದುವ ಸುಂದರನ್ಯಾರೆ ತಂಗಿ ಸುಂದರನಿವನೆ ankita indiresha KOLALANOODUVA SUNDARANYAARE TANGI SUNDARANIVANE

ಕೊಳಲನೂದುವ ಸುಂದರನ್ಯಾರೆ ತಂಗಿಸುಂದರನಿವನೆ ಮಂದರೋದ್ಧರನೆ ಪ

ಪುರುಷರೂಪದಿ ಪಾಲುದಧಿ ಕಟಿದಾ ತಂಗಿತರುಣಿರೂಪದಿ ಸುಧೆ ಸುರರಿಗಿತ್ತನು ತಂಗಿ 1

ಸತಿಯಲ್ಲದಲೆ ಸುತರನು ಪಡೆದನು ತಂಗಿಪತಿಯ ಕೂಡದ ಅಪ್ರತಿಮ ತರುಣಿ ತಂಗಿ 2

ಮುಂಜಿ ಆಗದಲೆ ಮಕ್ಕಳ ಪಡೆದವ ತಂಗಿಸಂಜೆ ಆಗದಲೆ ರಾತ್ರಿ ಮಾಡಿದ ತಂಗಿ 3

ಅತ್ತೆಯಾ ಕಾಲಿಂದ ಪಡೆದಾನೆ ತಂಗಿಚಿತ್ರ ಚರಿತ್ರೆ ವೃಜದೊಳಾಡಿದ ತಂಗಿ 4

ವಾಸುದೇವ ಇಂದಿರೇಶ ಇವನ ತಂಗಿಕೂಸು ತರುಣನಾಗಿ ಮೋಸ ಮಾಡಿದ ತಂಗಿ 5

***