Showing posts with label ಎಂದು ಹರಿಭಟರು ಕೆಡರು ಇವರಿಗೆ prasannavenkata. Show all posts
Showing posts with label ಎಂದು ಹರಿಭಟರು ಕೆಡರು ಇವರಿಗೆ prasannavenkata. Show all posts

Saturday, 9 November 2019

ಎಂದು ಹರಿಭಟರು ಕೆಡರು ಇವರಿಗೆ ankita prasannavenkata

by ಪ್ರಸನ್ನವೆಂಕಟದಾಸರು
ಎಂದು ಹರಿಭಟರು ಕೆಡರು ಇವರಿಗೆ ಮತ್ತೆಂದಿಗಿಲ್ಲೆಡರು ತೊಡರುಪ.

ಘಟಜನುಕ್ತಿಯಲಿಕರಿಗಟ್ಟಿಯಾಗಿ ಪ್ರಾಣ ಸಂಕಟಬಡಲು ನಕ್ರನ ತುಟಿ ಹರಿದುಹರಿಪೊರೆದ1

ಎಣಿಕೆಯಿಲ್ಲದ ಪಾಪ ಎಣಿಸಿ ಬಂದ್ಯಮನವರಹಣಿದು ವಿಪ್ರಜಾಮಿಳನ ವನಜಾಕ್ಷ ಪುರಕೊಯ್ದ 2

ಮುನಿ ಕನಲಿ ಅಂಬರೀಷನ ದಣಿಸುತಿರೆ ಚಕ್ರವನು ಕಳುಹಿ ವೈಷ್ಣವಾಗ್ರಣಿಯ ಛಲ ಗೆಲಿಸಿದನು 3

ಕಪಟಿ ಕೌರವ ಪಾಂಡುನೃಪಜರನು ಬೆಂಕೊಳಲುಕುಪಿತನಾಗಲೆ ಬಂದು ಕೃಪೆಯಿಂದ ಕಾಯ್ದ ಗಡ 4

ಶ್ರೀಪ್ರಸನ್ವೆಂಕಟನ ಶ್ರೀಪದವ ನಂಬಿದರೆಶಾಪ ಪಾಪೋಗ್ರಸಂತಾಪವೇನು ಮಾಡುವುವು 5
*******