Showing posts with label ಹೊಂದಿಕೊಂಡಿರಬೇಕು ಮನವೆ ಘನಚೈತನ್ಯ gopalarya. Show all posts
Showing posts with label ಹೊಂದಿಕೊಂಡಿರಬೇಕು ಮನವೆ ಘನಚೈತನ್ಯ gopalarya. Show all posts

Thursday, 5 August 2021

ಹೊಂದಿಕೊಂಡಿರಬೇಕು ಮನವೆ ಘನಚೈತನ್ಯ ankita gopalarya

by gopalaryaru

ಹೊಂದಿಕೊಂಡಿರಬೇಕು ಮನವೆ ಘನಚೈತನ್ಯಸಂದೋಹನಾದ ದೇಶಿಕನ ಪಾದಾಬ್ಜದೊಳು ಪ

ರಾಗವನು ನೆರೆಬಿಟ್ಟು ರತಿಯ ಮನದಲಿ ನೆಟ್ಟುಭಾಗವತನಾಗದರೊಳು ಭಕ್ತಿಯುಟ್ಟುಭೋಗವಾಂಛೆಯ ಬಿಟ್ಟು ಬೋಧಿಸುತಲೊತ್ತಟ್ಟುಯೋಗ ರಾಜ್ಯವ ಕಟ್ಟು ಯುಕ್ತಿುಂ ಸುಖಬಟ್ಟು 1

ಯಮ ನಿಯಮಗಳ ಮಾಡಿ ಏಕಾಗ್ರತೆಯೊಳಾಡಿಸಮ ಚಿತ್ತದೊಳ್ಪಾಡಿ ಸೌಖ್ಯವನು ಬೇಡಿಕ್ರಮದಿ ಸಾಧನೆಗೂಡಿ ಕಾಯ ದಂಡನೆ ಮಾಡಿವಿಮಲ ವೇದಾಂತ ವಿದ್ಯವನೊಲಿದು ನೋಡಿ2

ಭೇದ ಬುದ್ಧಿಯನುಳಿದು ಭಿಕ್ಷಾನ್ನದೊಳ್ಬೆಳೆದುವಾದ ವಿದ್ಯವ ಕಳೆದು ವಸ್ತುವೆಂದರಿದೂಸಾಧನಗಳೊಳ್ಮೆರೆದು ಸಂಸ್ಕøತಿ ಪಥವ ತರಿದುಸಾಧು ಗೋಪಾಲಾರ್ಯ ಗುರುವಿನೊಳ್ಬೆರೆದೂ 3

****