Showing posts with label ದುರುಳನ್ನ ಪರಿಹರಿಸೊ vijaya vittala suladi ಸಕಲ ಆಪತ್ತು ನಿವಾರಣೆ ಸುಳಾದಿ DURULANNA PARIHARISO SAKALA AAPATTU NIVARANE SULADI. Show all posts
Showing posts with label ದುರುಳನ್ನ ಪರಿಹರಿಸೊ vijaya vittala suladi ಸಕಲ ಆಪತ್ತು ನಿವಾರಣೆ ಸುಳಾದಿ DURULANNA PARIHARISO SAKALA AAPATTU NIVARANE SULADI. Show all posts

Sunday, 8 December 2019

ದುರುಳನ್ನ ಪರಿಹರಿಸೊ vijaya vittala suladi ಸಕಲ ಆಪತ್ತು ನಿವಾರಣೆ ಸುಳಾದಿ DURULANNA PARIHARISO SAKALA AAPATTU NIVARANE SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

 ಸಕಲ ಆಪತ್ತು ನಿವಾರಣೆ ವಿಷಯ ಪ್ರಾರ್ಥನಾ ಸುಳಾದಿ 
( ಮಹಾ ಆಪತ್ತು , ವಿಪತ್ತು , ಶತ್ರು ಜ್ಞಾತಿ , ಕಾರಾಗ್ರಹ, ಬಂಧ , ಆಧಿ ವ್ಯಾಧಿ , ದುಷ್ಟ ಕ್ರೂರಮೃಗ, ಕೀಟ, ವೃಶ್ಚಿಕ, ಸರ್ಪ, ಭೂತಪ್ರೇತ, ಪಿಶಾಚ, ಕ್ರೂರಮೃಗ ಬಾಧಾ, ರಾಜಾಗ್ನಿ, ಚೋರ , ತಾಪತ್ರಯ, ದಾರಿದ್ರ್ಯಗಳು ಸಹ ಪರಿಹಾರವಾಗುವವು , ಸರ್ವೇಷ್ಟಾ ಪ್ರಾಪ್ತಿ ) 

 ರಾಗ ಕಾನಡ 

 ಧ್ರುವತಾಳ 

ದುರುಳನ್ನ ಪರಿಹರಿಸೊ ದುರ್ಗಾರಮಣ ಹರಿ 
ಉರಗಾಭರಣ ರುದ್ರನಾಮಕ ನಾರಾಯಣ 
ಸರಳೊಂದು ಎಚಿಯೆ ಸಪ್ತ ತೃಣರಾಜ ತರುಗಳ 
ಧರಣಿಗೆ ಒರಗಿಸಿದ ಧೈರ್ಯಶಾಲಿ 
ಇರಳು ಹಗಲು ನಿನ್ನ ಶರಣಂಗೆ ಪ್ರೀತಿಯಾದ 
ನರರಿಗೆ ಮನೋವಾಚಕಾಯದಲ್ಲಿ 
ಅರ ಎಳ್ಳಿನಿತಾದರು ವಿಪತ್ತು ಎಂಬೊದುಂಟೆ 
ಕರುಣಾಕರ ದೇವ ಅಮೃತ ಹಸ್ತ 
ಗರಳುರಿ ಮಧ್ಯದಲ್ಲಿದ್ದ ಸಸಿಯಂತೆ ಜೀ -
ವರು ಇಪ್ಪರು ಕೇಳು ಕಡೆ ಹಾಯಿಸೊ 
ಪರಮ ಮೂರ್ಖರಾದರು ಶೋಧಿಸಿ ನೋಡಿದರು 
ಹರಿ ನಿನ್ನ ಲೀಲೆ ಕಾಣೆ ತಿಳಿದುಬಲ್ಲೆ 
ಪರರಿಗೆ ಪರಿಹಾಸ ಎಂತೆಂಬಿಯ ಭಕ್ತಜನರ 
ಪೊರೆವ ಬಿರುದು ನಿನ್ನದಲ್ಲವೇನಯ್ಯಾ
ಅರಿಯದವನಂತೆ ಸುಮ್ಮನಿರಲಾಗದೊ
ಪರಿಪಕ್ವ ಕಾಲ ಬಂದಿದೆ ಈಗಲೇ 
ಮೊರೆ ಹೊಕ್ಕೆನಯ್ಯಾ ನಿನ್ನ ಚರಣಾಬ್ಜಯುಗಳ 
ನೆರೆ ಮಾತು ಲಾಲಿಸು ಮನಕೆ ತಂದು 
ಬರಿದಾಗಿ ಪೋಗದಂತೆ ಮಾಡೊ ಮಹಾಪ್ರಬಲ 
ತುರಗವೇರಿದ ಕಲ್ಕಿ ಖಳಮರ್ದನ 
ಪರೀಕ್ಷೆ ಮಾಡುವ ಕಾಲ ಸ್ವಲ್ಪವಾದರು ಇಲ್ಲ 
ಸರುವ ಬಗೆಯಿಂದ ವಿಚಾರಿಸೆ 
ಕೊರಳ ಗತಾರ್ತರಾಗಿ ಕೇವಲ ನಿರವಿಣ್ಯ
ಪರರಾಗಿ ದೈನ್ಯವೃತ್ತಿ ಬಡುತಿಪ್ಪರೊ 
ವರ ಅಭಯಮೂರ್ತಿ ಇಂಥ ಸಮಯಕ್ಕೆ ನಿನ್ನ 
ಚರಿತೆ ತೋರದಿದ್ದಡೆ ಇನ್ನಾವಾಗ ತೋರ್ಪೆ 
ಹಿರಿಯರು ಪಿಂತೆ ರಾಯರಿಗೆ ಬಂದ ಕುಯೋಗ 
ಪರಿಹರಿಸಿ ಕೀರ್ತಿ ಪೊತ್ತು ನಿನ್ನವರಾಗಿ 
ಧರೆಯೊಳಗೆ ಮೆರೆದು ಜಯವಂತರೆನಿಸಿ ಡಂ -
ಗುರವ ಹೊಯಿಸಿ ನಿನ್ನ ಒಲಿಸಲಿಲ್ಲೆ 
ನೆರೆ ಹೊರೆಯವನಲ್ಲ ನಾನವರ ಶಿಷ್ಯರ 
ಕರುಣಾ ಕಟಾಕ್ಷಕ್ಕೆ ಯೋಗ್ಯನಹುದೊ 
ಹರಿ ನೀನೆ ಉಪೇಕ್ಷ ಮಾಡಿದರೆ ನಿಂ -
ದಿರ ಮಾರ್ಗ ಕಾಣೆನೊ ಪರಮ ಮಿತ್ರ 
ಹರುವ ಹೆದ್ದೊರೆಯೊಳುಕ್ಹಾಸೊ ಈಸುಕಾಯಿ  
ಹರಗೋಲು ತಪ್ಪಿ ಕೈಸೋತು ಕಡಿಗೆ 
ಬರುವ ಮನುಜ ನಡುವೆ ಮುಣುಗುವ ಪರಿಯಂತೆ 
ತೆರೆನಾಗಿದೆ ಇನ್ನೇನುಳಿದೆ ಇಲ್ಲ 
ಸುರಪಾಲಾನುತ ಸಿರಿ ವಿಜಯವಿಟ್ಠಲ ನಿನ್ನ 
ಕರುಣವಾದರೆ ಕೋಟಿ ಪ್ರತಿಬಂಧಕ ಹರವು ॥ 1 ॥ 

 ಮಟ್ಟತಾಳ 

ಕಣ್ಣಿಲೆ ಕೊರೆ ಜೀವ ಹಿಡಕೊಂಡು ಜನರು 
ಖಿನ್ನರಾಗಿ ಬಹಳ ಖೇದ ಬಡುತಲಿಹರೊ 
ಮುನ್ನೆ ಉಪಾಯಗಳು ಒಂದಾದರು ಅವರು 
ಇನ್ನು ಕಾಣರು ಕಾಣೊ, ಇತ್ತ ಮೊಗವಾಗೊ 
ಬಿನ್ನೈಸುವೆನೊ ಮುಂದಣ ವಿಚಾರ, ಪ್ರ -
ಸನ್ನ ವದನ ಒಲಿದವರ ಚಿತ್ತಾಪಹಾರಿ 
ಘನ್ನ ಮಹಮಹಿಮ ವಿಜಯವಿಟ್ಠಲ , ದೈತ್ಯಾ -
ರಣ್ಯವ ಸವರುವ, ಸಂತತ ಗುಣಶೀಲ ॥ 2 ॥ 

 ತ್ರಿವಿಡಿತಾಳ 

ಪ್ರಜೆಗಳ ಕ್ಷೋಭಿಯ ನೋಡಲಾರದೆ ನಿನಗೆ 
ಭಜನೆಯಿಂದಲೆ ನಾನು ಮೊರೆಯಿಟ್ಟೆನಯ್ಯಾ 
ಗಜರಾಜ ಎಲ್ಲರಿಗೆ ಮೇಲು ಪಙ್ತಿಯ ಹಾಕಿ 
ತ್ರಿಜಗದೊಳಗೆ ಸಂಭವಾಮಿ ಯುಗೆ ಯುಗೆ
ನಿಜವಾಕ್ಯ ಭಕ್ತರ್ಗೆ ದೊರೆತಿಪ್ಪದೊ 
ರಜದೂರ ನಿನ್ನವತಾರ ಕೃತ್ಯವೇ ಭೂ -
ಭುಜರ ಶಕ್ತಿ ನಿನ್ನದಲ್ಲವೇನೈ
ಯಜಮಾನ ಸಕಲಕ್ಕೂ ನೀನಾದ ಕಾರಣ ಯೋ -
ನಿಜರು ಪೌರುಷ ಪೇಳಿ ವ್ಯರ್ಥವಹರೆ 
ವೃಜದಲ್ಲಿ ಕಾಲಾನಳನು ನುಂಗೆ ಗೋಗೋಪ 
ವೃಜಗಳ ಕಾಯ್ದ ವೈಭವ ಪ್ರಭುವೆ 
ದ್ವಿಜ ದೇವ ವೃತ್ತಿ ಕ್ಷೇತ್ರ ಧರ್ಮ ಮೊದಲಾದ 
ಯಜನಾದಿಗಳು ನಿರುಪದ್ರವಾಗಿ 
ಸುಜನರು ಸಂತೋಷದಿಂದಲ್ಲಿಪ್ಪರು ನಿತ್ಯ 
ವಿಜಯವಾಗಿಪ್ಪುದು ನೋಳ್ಪರಿಗೆ 
ಕುಜನರ ಪಾಪ ಪೂರತಿಯಾಗುವ ತನಕ 
ಅಜನಯ್ಯ ಎನಗೆ ಈ ಮಾತು ದೊರಕುವದೇನೊ 
ಭುಜಗೇಂದ್ರ ಶಯನ ಸಿರಿ ವಿಜಯವಿಟ್ಠಲ ಎನ್ನ 
ಋಜುವಾಕ್ಯವೆಂಬೋದೆ  ಬಾಣ ಪ್ರಯೋಗವು ॥ 3 ॥ 

 ಅಟ್ಟತಾಳ 

ಆಲಸ್ಯ ಮಾಡೋದು ಸಲ್ಲ ಶ್ರೀನಲ್ಲ ಬಲು 
ಬಾಲಮತಿಯವ ನಾನು ಸುರಧೇನು ನಿನ್ನ 
ಪಾಲಿಗೆ ಬಂದಿಹೆನಯ್ಯಾ ಪಿಡಿ ಕೈಯ್ಯ ಇಂದು 
ನಾಲಿಗೆಯಿಂದ ಬಂದ ಬಲು ಛಂದ ಮಾತು 
ಪಾಲಿಸು ಪರಮ ಪಾವನ್ನ ಮೋಹನ್ನ ದೇವ ಸ್ವಾಮಿ 
ಹೇಳಿದ್ದು ಪೊಳ್ಳಾಗಗೊಡದೆ ಹೀಗೆ ಬಿಡದೆ ಸತ್ಯ 
ವಾಲಯವಾಗಲಿ ಸ್ವಾಮಿ ಅಂತರ್ಯಾಮಿ ಇದು 
ಕೇಳೊ ಎನ್ನಂತೆ ಕರ್ನದಲ್ಲಿ ಕಾಲ -
ಕಾಲಕೆ ಅನ್ನ್ಯಾಪೇಕ್ಷಿಸದೆ ಉಪೇಕ್ಷಿಸದೆ ಹರಿ 
ವಾಲಗ ಮತ್ತೊಂದರಿಯೆ, ಎನ್ನ ಧೊರೆಯೆ, ದೇಶ -
ಕಾಲಗುಣ ಪರಿಪೂರ್ಣ ನಾನಾವರ್ಣ ತೇಜ 
ಪಾಲಸಾಗರ ಸರ್ಪಶಾಯಿ, ನಮ್ಮ ತಾಯಿ ದಿವ್ಯ 
ಮೇಲು ಮೇಲು ನಿನ್ನ ಶಕ್ತಿ, ಎನ್ನ ಉಕ್ತಿ ನಿಜ 
ತಾಳಿದೆ ಹತ್ತಾವತಾರ, ಭವತಾರ ನಿ -
ನ್ನಾಳಿಗೆ ಬರುವದು ಕೀರ್ತಿ ನಿನ್ನ ವಾರ್ತಿ ಭವ್ಯ 
ಕೇಳಿದರಿಂದ ಮುಕ್ತಿ, ಸದ್ಯ ಭುಕ್ತಿ ಭಕ್ತಿ 
ಮೇಲು ಸುಜ್ಞಾನ ವೈರಾಗ್ಯವೆಂಬೊ, ಭಾಗ್ಯ ಕೃಷ್ಣ 
ನೀಲಾಂಗ ವಿಜಯವಿಟ್ಠಲ ಅಕುಟಿಲ, ಸುಖ ದಿವದಿ 
ಬಾಳಿದೆ ನಿನ್ನಂಘ್ರಿ ಸೇರಿ ಮನಸಾರಿ ॥ 4 ॥ 

 ಆದಿತಾಳ 

ಭೂಮಿ ಸುರರು ನಿಂದು ಮಾಡಿದ ಜಪತಪ 
ನೇಮನಿತ್ಯಂಗಳೇಸು ಕಾಮ್ಯಕ ಮಾಡಲು 
ಯಾಮ ಯಾಮಕೆ ಮಾತ್ರ ಸಿದ್ಧಿಯಾಗಲಿ ನಿ -
ಷ್ಕಾಮಕವಾಗಲಿ ಎನಗೆ ನುಡಿದು ಲಿಪಿಸಿದ ಪ್ರತಿ 
ಭೀಮ ಪರಾಕ್ರಮ, ದುಷ್ಟನಿಗ್ರಹ ಸುರ -
ಪ್ರೇಮ ಫಲಪ್ರದ ಪ್ರಾಕೃತಕಾಯರಹಿತ 
ಶ್ರೀಮದಾಚಾರ್ಯನುತಪಾದ ವಿಜಯವಿಟ್ಠಲರೇಯ 
ತಾಮಸ ಖಂಡ್ರಿಸಿ ಎಲ್ಲರಿಗೆ ಸುಖವನೀಯೋ ॥ 5 ॥ 

 ಜತೆ 

ಉಭಯಾರ್ಥಕ್ಕಿದೆ ಸ್ತೋತ್ರ ಮಾಡಿ ಅರ್ಪಿಸಿದೆನೋ 
ಶುಭಮೂರುತಿ ನಮ್ಮ ವಿಜಯವಿಟ್ಠಲ ಬಾರೊ ॥
*********

ಶ್ರೀ ವಿಜಯದಾಸಾರ್ಯ ಕೃತ
ಸಕಲ ಆಪತ್ತು ನಿವಾರಣೆ ವಿಷಯ ಪ್ರಾರ್ಥನಾ ಸುಳಾದಿ

ರಾಗ ಕಾನಡ

ಧ್ರುವತಾಳ

ದುರುಳನ್ನ ಪರಿಹರಿಸೊ ದುರ್ಗಾರಮಣ ಹರಿ 
ಉರಗಾಭರಣ ರುದ್ರನಾಮಕ ನಾರಾಯಣ 
ಸರಳೊಂದು ಎಚ್ಚೆ ಸಪ್ತ ತೃಣರಾಜ ತರುಗಳ 
ಧರಣಿಗೆ ಒರಗಿಸಿದ ಧೈರ್ಯಶಾಲಿ 
ಇರಳು ಹಗಲು ನಿನ್ನ ಶರಣಂಗೆ ಪ್ರೀತಿಯಾದ 
ನರರಿಗೆ ಮನೋವಾಚಕಾಯದಲ್ಲಿ 
ಅರ ಎಳ್ಳಿನಿತಾದರು ವಿಪತ್ತು ಎಂಬೊದುಂಟೆ 
ಕರುಣಾಕರ ದೇವ ಅಮೃತ ಹಸ್ತ 
ಗರಳುರಿ ಮಧ್ಯದಲ್ಲಿದ್ದ ಸಸಿಯಂತೆ ಜೀ-
ವರು ಇಪ್ಪರು ಕೇಳು ಕಡೆ ಹಾಯಿಸೊ 
ಪರಮ ಮೂರ್ಖರಾದರು ಶೋಧಿಸಿ ನೋಡಿದರು 
ಹರಿ ನಿನ್ನ ಲೀಲೆ ಕಾಣೆ ತಿಳಿದುಬಲ್ಲೆ 
ಪರರಿಗೆ ಈ ಪರಿಹಾಸ ಎಂತೆಂಬಿಯಾ ಭಕ್ತಜನರ 
ಪೊರೆವ ಬಿರುದು ನಿನ್ನದಲ್ಲವೇನೈಯ್ಯ
ಅರಿಯದವನಂತೆ ಸುಮ್ಮನಿರಲಾಗದೊ
ಪರಿಪಕ್ವಕಾಲ ಬಂದಿದೆ ಈಗಲೇ 
ಮೊರೆ ಹೊಕ್ಕೆನಯ್ಯಾ ನಿನ್ನ ಚರಣಾಬ್ಜಯುಗಳ 
ನೆರೆ ಮಾತು ಲಾಲಿಸು ಮನಕೆ ತಂದು 
ಬರಿದಾಗೆ ಪೋಗದಂತೆ ಮಾಡೊ ಮಹಾ ಪ್ರಬಲ 
ತುರಗವೇರಿದ ಕಲ್ಕಿ ಖಳಮರ್ದನ 
ಪರೀಕ್ಷೆ ಮಾಡುವ ಕಾಲ ಸ್ವಲ್ಪವಾದರು ಇಲ್ಲ 
ಸರುವ ಬಗೆಯಿಂದ ವಿಚಾರಿಸೆ 
ಕೊರಳಗತಾರ್ತರಾಗಿ ಕೇವಲ ನಿರವಿಣ್ಯ
ಪರರಾಗಿ ದೈನ್ಯವೃತ್ತಿ ಬಡುತಿಪ್ಪರೊ 
ವರ ಅಭಯಮೂರ್ತಿ ಇಂಥ ಸಮಯಕ್ಕೆ ನಿನ್ನ 
ಚರಿತೆ ತೋರದಿದ್ದಡೆ ಇನ್ನಾವಾಗ ತೋರ್ಪೆ 
ಹಿರಿಯರು ಪಿಂತೆ ರಾಯರಿಗೆ ಬಂದ ಕುಹೂಯೋಗ 
ಪರಿಹರಿಸಿ ಕೀರ್ತಿ ಪೊತ್ತು ನಿನ್ನವರಾಗಿ 
ಧರಣಿಯೊಳಗೆ ಮೆರೆದು, ಜಯವಂತರೆನಿಸಿ ಡಂ -
ಗುರವ ಹೊಯಿಸಿ ನಿನ್ನ ಒಲಿಸಲಿಲ್ಲೆ 
ನೆರೆ ಹೊರೆಯವನಲ್ಲ ನಾನವರ ಶಿಷ್ಯರ 
ಕರುಣಾಕಟಾಕ್ಷಕ್ಕೆ ಯೋಗ್ಯನಹುದೊ 
ಹರಿ ನೀನೇ ಉಪೇಕ್ಷೆ ಮಾಡಿದರೆ ನಿಂ -
ದಿರ ಮಾರ್ಗ ಕಾಣೆನೊ ಪರಮ ಮಿತ್ರ ಹರುವ ಹೆದ್ದೊರೆಯೊಳುಕ್ಕಾಸು ಈಸುಕಾಯಿ 
ಹರಗೋಲು ತಪ್ಪಿ ಕೈಸೋತು ಕಡಿಗೆ 
ಬರುವ ಮನುಜ ನಡುವೆ ಮುಣುಗುವ ಪರಿಯಂತೆ ತೆರೆನಾಗಿದೆ ಇನ್ನೇನು ಉಳಿದೆ ಇಲ್ಲ 
ಸುರಪಾಲಾನುತ ಸಿರಿ ವಿಜಯವಿಠಲ ನಿನ್ನ 
ಕರುಣವಾದರೆ ಕೋಟಿ ಪ್ರತಿಬಂಧಕ ಹರವು || ೧ ||

ಮಟ್ಟತಾಳ

ಕಣ್ಣಿಲೆ ಕೊರೆ ಜೀವ ಹಿಡಕೊಂಡು ಜನರು 
ಖಿನ್ನರಾಗಿ ಬಹಳ ಖೇದ ಬಡುತಲಿಹರೊ 
ಮುನ್ನೆ ಉಪಾಯಗಳು ಒಂದಾದರು ಅವರು 
ಇನ್ನು ಕಾಣರು ಕಾಣೊ, ಇತ್ತ ಮೊಗವಾಗೊ 
ಬಿನ್ನೈಸುವೆನೊ ಮುಂದಣ ವಿಚಾರ, ಪ್ರ -
ಸನ್ನ ವದನ ಒಲಿದವರ ಚಿತ್ತಾಪಹಾರಿ 
ಘನ್ನ ಮಹಮಹಿಮ ವಿಜಯವಿಠ್ಠಲ, ದೈತ್ಯಾ -
ರಣ್ಯವ ಸವರುವ, ಸಂತತ ಗುಣಶೀಲ || ೨ ||

ತ್ರಿವಿಡಿತಾಳ

ಪ್ರಜೆಗಳ ಕ್ಷೋಭೆಯ ನೋಡಲಾರದೆ ನಿನಗೆ 
ಭಜನೆಯಿಂದಲಿ ನಾನು ಮೊರೆಯಿಟ್ಟೆನಯ್ಯಾ 
ಗಜರಾಜ ಎಲ್ಲರಿಗೆ ಮೇಲು ಪಂಙ್ತಿಯ ಹಾಕಿ 
ತ್ರಿಜಗದೊಳಗೆ ಇಂತು ತೋರಿ ಕೊಟ್ಟ 
ದ್ವಿಜರಾಜಧ್ವಜನೆ ಸಂಭವಾಮಿ ಯುಗೇ ಯುಗೇ 
ನಿಜವಾಕ್ಯ ಭಕ್ತರ್ಗೆ ದೊರೆತಿಪ್ಪದೊ 
ರಜದೂರ ನಿನ್ನವತಾರ ಕೃತ್ಯವೆ ಭೂ -
ಭುಜರ ಶಕ್ತಿ ನಿನ್ನದಲ್ಲವೇನೈಯ್ಯ
ಯಜಮಾನ ಸಕಲಕ್ಕೂ ನೀನಾದ ಕಾರಣ ಯೋ -
ನಿಜರು ಪೌರುಷ ಪೇಳಿ ವ್ಯರ್ಥವಹರೆ 
ವ್ರಜದಲ್ಲಿ ಕಾಲಾನಳನು ನುಂಗೆ ಗೋಗೋಪ 
ವ್ರಜಗಳ ಕಾಯ್ದ ವೈಭವ ಪ್ರಭುವೆ 
ದ್ವಿಜ ದೇವ ವೃತ್ತಿ ಕ್ಷೇತ್ರ ಧರ್ಮ ಮೊದಲಾದ 
ಯಜನಾದಿಗಳು ನಿರುಪದ್ರವಾಗಿ 
ಸುಜನರು ಸಂತೋಷದಿಂದಲಿಪ್ಪರು ನಿತ್ಯ 
ವಿಜಯವಾಗಿಪ್ಪುದು ನೊಳ್ಪರಿಗೆ 
ಕುಜನರ ಪಾಪ ಪೂರತಿಯಾಗುವತನಕ 
ಅಜನಯ್ಯ ಎನಗೆ ಈ ಮಾತು ದೊರಕುವುದೇನೊ 
ಭುಜಗೇಂದ್ರಶಯನ ಸಿರಿ ವಿಜಯವಿಠ್ಠಲ ಎನ್ನ 
ಋಜುವಾಕ್ಯವೆಂಬೋದೆ ಬಾಣ ಪ್ರಯೋಗವು || ೩ ||

ಅಟ್ಟತಾಳ

ಆಲಸ್ಯ ಮಾಡೋದು ಸಲ್ಲ ಶ್ರೀನಲ್ಲ ಬಲು 
ಬಾಲಮತಿಯವ ನಾನು ಸುರಧೇನು ನಿನ್ನ 
ಪಾಲಿಗೆ ಬಂದಿಹೆನಯ್ಯಾ ಪಿಡಿ ಕೈಯ್ಯ ಇಂದು 
ನಾಲಿಗೆಯಿಂದ ಬಂದ ಬಲು ಛಂದ ಮಾತು 
ಪಾಲಿಸು ಪರಮ ಪಾವನ್ನ ಮೋಹನ್ನದೇವ ಸ್ವಾಮಿ 
ಹೇಳಿದ್ದು ವೊಳ್ಳಾಗಗೊಡದೆ ಹೀಗೆ ಬಿಡದೆ ಸತ್ಯ 
ವಾಲಯವಾಗಲಿ ಸ್ವಾಮಿ ಅಂತರ್ಯಾಮಿ ಇದು 
ಕೇಳೊ ಎನ್ನಂತೆ ಕರ್ಣದಲ್ಲಿ ಕಾಲ ಕಾಲಕೆ ಅನ್ಯಾಪೇಕ್ಷಿಸದೆ ಉಪೇಕ್ಷಿಸದೆ ಹರಿ 
ವಾಲಗ ಮೊತ್ತೊಂದರಿಯೆ, ಎನ್ನ ಧೋರೆಯೇ, ದೇಶ 
ಕಾಲ ಗುಣ ಪರಿಪೂರ್ಣ ನಾನಾವರ್ಣ ತೇಜ 
ಪಾಲಸಾಗರ ಸರ್ಪಶಾಯಿ, ನಮ್ಮ ತಾಯಿ ದಿವ್ಯ 
ಮೇಲು ಮೇಲು ನಿನ್ನ ಶಕ್ತಿ, ಎನ್ನ ಉಕ್ತಿ ನಿಜ 
ತಾಳಿದೆ ಹತ್ತಾವತಾರ, ಭವತಾರ ನಿ -
ನ್ನಾಳಿಗೆ ಬರುವುದು ಕೀರ್ತಿ ನಿನ್ನ ವಾರ್ತಿ ಭವ್ಯ 
ಕೇಳಿದರಿಂದ ಮುಕ್ತಿ, ಸದ್ಯ ಭುಕ್ತಿ ಭಕ್ತಿ 
ಮೇಲು ಸುಜ್ಞಾನ ವೈರಾಗ್ಯವೆಂಬೊ, ಭಾಗ್ಯ ಕೃಷ್ಣ 
ನೀಲಾಂಗ ವಿಜಯವಿಠ್ಠಲ ಅಕುಟಿಲ, ಸುಖ, ದಿವದಿ 
ಬಾಳಿದೆ ನಿನ್ನಂಘ್ರಿ ಸೇರಿ ಮನಸಾರಿ || ೪ ||

ಆದಿತಾಳ

ಭೂಮಿ ಸುರರು ನಿಂದು ಮಾಡಿದ ಜಪ ತಪ 
ನೇಮ ನಿತ್ಯಂಗಳೇಸು ಕಾಮ್ಯಕರ್ಮ ಮಾಡಲು 
ಯಾಮ ಯಾಮಕೆ ಮಾತ್ರ ಸಿದ್ಧಿಯಾಗಲಿ ನಿ -
ಷ್ಕಾಮಕವಾಗಲಿ ಎನಗೆ ನುಡಿದು ಲಿಪಿಸಿದ ಪ್ರತಿ 
ಭೀಮ ಪರಾಕ್ರಮ, ದುಷ್ಟನಿಗ್ರಹ ಸುರ 
ಪ್ರೇಮ ಫಲಪ್ರದ ಪ್ರಾಕೃತ ಕಾಯರಹಿತ 
ಶ್ರೀಮದಾಚಾರ್ಯನುತಪಾದ ವಿಜಯವಿಠಲರೇಯ 
ತಾಮಸ ಖಂಡಿಸಿ ಎಲ್ಲರಿಗೆ ಸುಖವನೀಯೋ || ೫ ||

ಜತೆ

ಉಭಯಾರ್ಥಕ್ಕಿದೆ ಸ್ತೋತ್ರ ಮಾಡಿ ಅರ್ಪಿಸಿದೆನೋ 
ಶುಭಮೂರುತಿ ನಮ್ಮ ವಿಜಯವಿಠ್ಠಲ ಬಾರೋ ॥
****

just scroll down for other devaranama