..
ಮೊದಲೆ ಪಾಲಿಸೆನ್ನ ಮೊದಲಗಟ್ಟಿ ಹನುಮನೆ
ಮುದದಿ ಜಾನಕಿಗೆ ಮುದ್ರೆಯಿಟ್ಟ ವಾನರನೆ ಪ
ದಶರಥಾತ್ಮಜನ ಬಳಿಗೆ ವಾರಿಧಿನ್ಹಾರಿ ವಸುಧೆ
ಕುಶಲವಾರ್ತೆ ತಂದಸುರನ ದಶಶಿರಗಳ ಧ್ವಂಸಮಾಡಿದ 1
ಕೀಚಕಾದಿ ಮಗಧ ದುಶ್ಶಾಸ(ನ) ದುರುಳ ದುರ್ಯೋಧನರ
ನಾಶಮಾಡಿದಂಥ ಭಾರತೀಶ ಭಾಳ ದಯವನಿಟ್ಟು 2
ವಂದಿಸುವೆನು ಶ್ರೀಮದಾನಂದತೀರ್ಥರಾಗಿ ನಂದನ
ಕಂದ ಭೀಮೇಶ ಕೃಷ್ಣನರವಿಂದ ಪಾದಕ್ವಂದಿಸುವನೆ 3
***