by ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆ
ಮುನಿ ಕುಲೋತ್ತಮ ಗುರು-
ರಾಯರ ಸದ್ವಂಶೋದ್ಭವ ।
ಮುನೀಂದ್ರತೀರ್ಥ ಯತಿ -
ಚಂದ್ರಮನ ನೋಡೋಣ ಬಾ ಸಖೀ ।। ಪಲ್ಲವಿ ।।
ಸುಂದರ ವೃಂದಾವನದಿ ರಾಜಿಸುವ ।
ವಂದ್ಯ ಜನರ ಪೊರೆವ ಯತಿವರ ।। ಚರಣ ।।
ಶೇಷ ಸನ್ನಿಧಾನದಿ ಶೋಭಿಪ । ಅ ।
ಶೇಷ ಸುಜನರ ಕಲ್ಪದ್ರುಮನ ।। ಚರಣ ।।
ವಿಬುಧೇಂದ್ರ ವಿಜಯ ವಿರಚಿಸಿದ ಧೀರ ।
ವಿಬುಧೇಶರೊಡೆಯ ವೇಂಕಟನಾಥನ -
ಪ್ರಿಯ ಗುರುಗಳ ।। ಚರಣ ।।
***