RAO COLLECTIONS SONGS refer remember refresh render DEVARANAMA
ಈತನೇನೆ ಮುಖ್ಯ ಪ್ರಾಣದೇವರು ಪ.
ಖ್ಯಾತಿಯ ಪಡೆದ ರಾಮ ದೂತನು ಅ.ಪ.
ಅಂಜನೆಯ ಕುಮಾರ ರಾಕ್ಷಸರ ಸಂಹಾರ
ಸಂಜೀವನವ ತಂದ ಧೀರ ಸಾಗರವ ದಾಟಿದ 1
ಕುಂತಿಯಾ ಕಂದ ಕೀಚಕನ ಕೊಂದ
ಸತಿಗೆ ಕುಸುಮವಾ ತಂದೆ ಲೋಕದೊಳಗೆ ಆನಂದ 2
ಮದ್ಯಗೇಹನಲಿ ಜನಿಸಿ ಪ್ರಖ್ಯಾತನೆನಿಸಿ
ಕಾಳೀಮರ್ಧನಕೃಷ್ಣನಲಿ ಮನಸಿಟ್ಟ ಯತಿಯೆ 3
****