Showing posts with label ವೈದ್ಯನ ನಾನರಿಯೆ ಭವರೋಗ ವೈದ್ಯನು purandara vittala VAIDYANA NAANARIYE BHAVAROGA VAIDYANU. Show all posts
Showing posts with label ವೈದ್ಯನ ನಾನರಿಯೆ ಭವರೋಗ ವೈದ್ಯನು purandara vittala VAIDYANA NAANARIYE BHAVAROGA VAIDYANU. Show all posts

Friday 21 May 2021

ವೈದ್ಯನ ನಾನರಿಯೆ ಭವರೋಗ ವೈದ್ಯನು purandara vittala VAIDYANA NAANARIYE BHAVAROGA VAIDYANU

 


ರಾಗ : ಶ್ರೀ   ಆದಿತಾಳ (ವಿಷಮಗ್ರಹ)

 2nd Audio by Vidwan Sumukh Moudgalya



ವೈದ್ಯನ ನಾನರಿಯೆ ॥ಪ॥


ಭವರೋಗ ವೈದ್ಯನು ನೀ ಹರಿಯೇ ಬಂಧು ನೀನೆ ॥ಅ.ಪ॥


ಕೃಷ್ಣ ನೀ ಕೈಪಿಡಿದು ಕಪಟದಿ ಉಷ್ಣವಾಯು ಜರಿದು

ವಿಷ್ಣುಭಕ್ತಿ ನಿನ್ನ ಸೇವೆ ಎನಗಿತ್ತು 

ಉತ್ಕೃಷ್ಟನ ಮಾಡೆನ್ನ ಕಷ್ಟ ಪಡಿಸದೆ ॥೧॥


ಹರಿ ನಿಮ್ಮ ಶರಣೆಂಬ ರಸದಲಿ ಚರಣ ಧ್ಯಾನವಿತ್ತು

ಗುರುತರ ಮಾತ್ರೆಗಳೆನಗೆ ಕೊಟ್ಟು

ದುರಿತ ಪಾರುಗೆಯ್ವ ಬಂಧು ನೀನಲ್ಲದೆ ॥೨॥


ನಿನ್ನ ದಾಸ ನಾನು ದುರಿತಗಳೆನ್ನ ಕಾಡುವುದೇನು ಉಚಿತವಯ್ಯ

ಘನ್ನ ಶ್ರೀಪುರಂದರವಿಠಲ ರಾಯನೆ

ಎನ್ನ ದುರಿತವ ಹರಿಸುವನಲ್ಲದೆ ॥೩॥

***

pallavi

vaidyana nAnariye bhavarOga vaidya nInE hariyE

anupallavi

bhavarOgake bandhu nIne

caraNam 1

krSNa nI kai piDidu kapaTadi uSNavAyu jaridu viSNu bhakta
ninna sEve enagittu utkrSTana mADenna kaSTa paDisade

caraNam 2

hari nimma sharaNavemba rasadali caraNa dyAnavittu gurutara
mAtregaLenage koTTu durita pArugeiva bandhu nInallade

caraNam 3

ninna dAsa nAnu duritagaLenna kADuvudEnu ucitavayya ghanna
shrI purandara viTTalarAyane enna duritava harisuvanallade
***

ಪುರಂದರದಾಸರು
ವೈದ್ಯವ ನಾನರಿಯೆ ಭವರೋಗದ-|
ವೈದ್ಯ ನೀನೆ ಹರಿಯೆ ಪ

ನೀ ದಯದಿಂದೆನ್ನ ರಕ್ಷಿಸು-ಆದಿವೈದ್ಯ ಮುನ್ನ |
ಪಾದೋದಕವನು ಎನಗೆ ಕೊಡಿಸು ಸರ್ವ-||
ವ್ಯಾಧಿನಿವಾರಣ ಕಷಾಯ ನೀ ಕೊಡು 1

ಹರಿನಿನ್ನ ಕರುಣವೆಂಬ-ಸ್ಮರಣೆಯ |
ತ್ವರಿತ ಙ್ಞÕನದಿಂದ ||
ಉರುತರ ಮಹಾತ್ಮೆಯ ಎನಗೆ ಕೊಡಿಸು ಸರ್ವ ||
ದುರಿತನಿವಾರಣ ಕಷಾಯ ನೀ ಕೊಡು 2

ಕೃಷ್ಣ ನೀ ಕೃಪೆವಿಡಿದು-ಕಪಟದ-|
ಉಷ್ಣವಾಯುವಳಿದು ||
ವಿಷ್ಣುಶಕ್ತಿಯೆಂದ ಅಭಯವ ಎನಗಿತ್ತು |
ಇಷ್ಟವ ಸಲಿಸುವ ತೃಪ್ತಿಪಡಿಸುವಂಥ 3

ನಿನ್ನ ದಾಸ ನಾನು-ದುರಿತಗ-|
ಸಳೆನ್ನ ಕಾಡುವುವೇನು ||
ಚೆನ್ನಾಗಿ ಕಾಯಕೆ ಶಕ್ತಿಯನಿತ್ತು ದೃಢ-|
ವನ್ನು ಮಾಡಿ ಶ್ರೀಹರಿ ಸಲಹೆನ್ನನು 4

ಪಂಡಿತದಯಾಸಿಂಧು-ಕಾಡುವ-|
ಪಾಂಡುರೋಗ ಕೊಂದು ||
ಪುಂಡರೀಕಾಕ್ಷಶ್ರೀಪುರಂದರವಿಠಲ ಅ-|
ಖಂಡಮೂರುತಿ ಶ್ರೀಹರಿ ಸಲಹೆನ್ನನು 5
****

ರಾಗ ಸುರುಟಿ ಅಟತಾಳ

ವೈದ್ಯನ ನಾನರಿಯೆ, ಭವರೋಗವೈದ್ಯ ನೀನೇ ಹರಿಯೇ ||ಪ||
ಭವರೋಗಕೆ ಬಂಧು ನೀನೆ ||ಅ||

ಕೃಷ್ಣ ನೀ ಕೈ ಪಿಡಿದು ಕಪಟದಿ ಉಷ್ಣವಾಯು ಜರಿದು
ವಿಷ್ಣುಭಕ್ತಿ ನಿನ್ನ ಸೇವೆ ಎನಗಿತ್ತು ಉತ್ಕೃಷ್ಟನ ಮಾಡೆನ್ನ ಕಷ್ಟ ಪಡಿಸದೆ ||

ಹರಿ ನಿಮ್ಮ ಶರಣವೆಂಬ ರಸದಲಿ ಚರಣಧ್ಯಾನವಿತ್ತು
ಗುರುತರ ಮಾತ್ರೆಗಳೆನಗೆ ಕೊಟ್ಟು ದುರಿತ ಪಾರುಗೆಯ್ವ ಬಂಧು ನೀನಲ್ಲದೆ ||

ನಿನ್ನ ದಾಸ ನಾನು ದುರಿತಗಳೆನ್ನ ಕಾಡುವುದೇನು ಉಚಿತವಯ್ಯ
ಘನ್ನ ಶ್ರೀಪುರಂದರವಿಠಲರಾಯನೆ ಎನ್ನ ದುರಿತವ ಹರಿಸುವನಲ್ಲದೆ ||
********