ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಬ್ರಹ್ಮಾನಂದ ಜಯ ಜಯವೆಂದು ಬೆಳಗುವೆ ಬೆಳಗಿಲಿ ನಿಮ್ಮಿಂದ ಪ
ಅರುವಿಗೆ ನಿಮ್ಮರುವುದೋರಿತು ಘನದರುವು ಅರುವೆ ಅರುವಾಗಿದೋರಿತು ಅರುವೆ ಘನ ಅರುಹು ತಿರುಹುಮುರವ್ಹಿನ ಕುರುವುದೋರಿತು ಘನದರುವು ಕುರುವ್ಹೆ ಕುರುವ್ಹಾಗಿದೋರಿತು ಘನ ಪರಾತ್ಪರವು 1
ಬೆಳಗಿನ ಘನ ಬೆಳಗು ಹೊಳೆವದು ಥಳಥಳವು ಹೇಳೇನಂದರೆ ಬಾರದು ತಿಳವ್ಹಿಗೆ ನಿಜಸುಳಹು ಕಳೆ ಮೊಳೆಗಳ ಉಳಹು ತುಳಕುತ ಘನದೊಲವು ಭಳಭಳ ಭಾಸುವ ನಿಮ್ಮ ಬೆಳಗೆ ನಿರ್ಮಳವು 2
ಅನುಭವದಾರತಿ ಸ್ವಾನುಭವದ ಪ್ರೀತಿ ಅನುದಿನ ಬೆಳಗುವದು ತಾ ಘನಗುರು ನಿಜಪ್ರೀತಿ ತಾನೆತಾನಾಗಿಹ ಙÁ್ಞನಸಾಗರ ಮೂರ್ತಿ ದೀನಮಹಿಪತಿ ಬೆಳಗುವೆ ಮನ ಮಂಗಳಾರ್ತಿ 3
***